ಟೋಲ್ಗೇಟ್ ಸಿಸಿ ಕ್ಯಾಮೆರಾಗೆ ಬಸ್ಸು ಡಿಕ್ಕಿ ಹೊಡೆಸಿದ ಕ್ಲೀನರ್

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಬೇಜವಾಬ್ದಾರಿಯ ಚಾಲನೆ ಮಾಡಿಕೊಂಡು ಬಂದ ಬಸ್ಸಿನ ಕ್ಲೀನರ್ ತಲಪಾಡಿ ಟೋಲ್ಗೇಟಿಗೆ ಅಳವಡಿಸಲಾಗಿದ್ದ ಸೀಸಿ ಕ್ಯಾಮೆರಾಕ್ಕೆ ಡಿಕ್ಕಿ ಹೊಡೆಸಿ 65,000 ರೂ ನಷ್ಟ ಉಂಟು ಮಾಡಿರುವ ಬಗ್ಗೆ ಉಳ್ಳಾಲ ಠಾಣಾ ಪೊಲೀಸರಿಗೆ ದೂರು ನೀಡಲಾಗಿದೆ.

ಕೇರಳ-ಕರ್ನಾಟಕದ ಗಡಿ ಪ್ರದೇಶವಾಗಿರುವ ತಲಪಾಡಿಯಲ್ಲಿ ಕೆಲವು ತಿಂಗಳ ಹಿಂದೆಯಷ್ಟೇ ಆರಂಭಗೊಂಡಿರುವ ತಲಪಾಡಿ ಟೋಲ್ಗೇೀಟ್ ಬಳಿ ಖಾಸಗಿ ಬಸ್ಸಿನ ಚಾಲಕನ ಅನುಪಸ್ಥಿತಿಯಲ್ಲಿ ಅದರ ಕ್ಲೀನರ್ ಆಗಿದ್ದ ನವೀನ ಎಂಬಾತ ಬಸ್ಸನ್ನು ಒಮ್ಮೆಲೇ ಹಿಂದಕ್ಕೆ ಚಲಾಯಿಸಿಕೊಂಡು ಬಂದು ಸಿಸಿ ಕ್ಯಾಮರಾ ಅಳವಡಿಸಿದ ಕಂಬಕ್ಕೆ ಡಿಕ್ಕಿ ಹೊಡೆಸಿದ್ದಾನೆ. ಇದರಿಂದ ಸಿಸಿ ಕ್ಯಾಮರಾದ ಪೆÇೀಲ್ ಬೇಸಮೆಂಟ್, ಪೆÇೀಲ್, ಸಿಸಿ ಝೂಮ್ ಕ್ಯಾಮರಾಕ್ಕೆ ಹಾನಿಯಾಗಿದೆ. ಉಳ್ಳಾಲ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.