ಆಭರಣದ ಬ್ಯಾಗ್ ಕಸಿದು ಪರಾರಿ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಬ್ಯೂಟಿ ಪಾರ್ಲರಿಗೆ ಬೀಗ ಹಾಕಿ ತಮ್ಮ 6ರ ಹರೆಯದ ಪುತ್ರನೊಂದಿಗೆ ದ್ವಿಚಕ್ರವಾಹನದಲ್ಲಿ ಮನೆಗೆ ತೆರಳುತ್ತಿದ್ದ ದೇರಳಕಟ್ಟೆ ನಿವಾಸಿ ನಾಝ್ ಮೇಲೆ ಬೈಕಿನಲ್ಲಿ ಬಂದ ಹೆಲ್ಮೆಟಧಾರಿ ಯುವಕರಿಬ್ಬರು ಹಲ್ಲೆ ನಡೆಸಿ, ನಾಝ್ ಅವರ ಚಿನ್ನಾಭರಣ, ನಗದು ಹಣವಿದ್ದ ಬ್ಯಾಗನ್ನು ಕಸಿದು ಪರಾರಿಯಾಗಿದ್ದಾರೆ.

ಬ್ಯಾಗಿನಲ್ಲಿ ಮೂರು ಸಾವಿರ ರೂ ನಗದು, 7 ಚಿನ್ನದ ಉಂಗುರ, ಒಂದು ಮೊಬೈಲ್ ಫೋನ್, ಚಾರ್ಜರ್, ಎಟಿಎಂ, ಪಾನ್‍ಕಾರ್ಡ್ ಇದ್ದು ಇವುಗಳನ್ನು ಕಸಿಯಲಾಗಿದೆ. ಸುಮಾರು 35 ಸಾವಿರ ರೂ ಮೌಲ್ಯದ ಸೊತ್ತುಗಳನ್ನು ಅವರು ಕಳೆದುಕೊಂಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.

ಇವರ ಖಾಲಿ ಬ್ಯಾಗ್ ಬಳಿಕ ದೇರಳಕಟ್ಟೆ ರಸ್ತೆ ಬದಿಯಲ್ಲಿ ಕಂಡುಬಂದಿದೆ.

ಘಟನೆ ನಡೆದ ಸ್ಥಳದಲ್ಲಿ ಸಿಸಿಟಿವಿ ಅಳವಡಿಸಲಾಗಿದ್ದು, ಶೀಘ್ರವೇ ಆರೋಪಿಗಳನ್ನು ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.


ಕಳವು ಪ್ರಕರಣ : ಇಬ್ಬರ ಬಂಧನ

 ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಕಾಸರಗೋಡು, ಕಣ್ಣೂರು, ಕಲ್ಲಿಕೋಟೆ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ನಡೆದ 30ಕ್ಕೂ ಅಧಿಕ ಕಳವು ಪ್ರಕರಣದ ಆರೋಪಿಗಳಿಬ್ಬರನ್ನು ಕಣ್ಣೂರು ಪೆÇಲೀಸರು ಬಂಧಿಸಿದ್ದಾರೆ.

ಇರಿಟ್ಟಿ ಮೀತಲ ಪುನ್ನಾಡ್ ಸನೀಶ್ ನಿವಾಸದ ಪಿ ಕೆ ಸಜೀಶ್ ಮತ್ತು ಮಟ್ಟನ್ನೂರು ಮರುತಾಯಿ ನಂಜಿಡತ್ತ್ ಹೌಸಿನ ಕೆ ವಿಜೇಶ್ ಎಂಬುವವರನ್ನು ಪೆÇಲೀಸರು ಬಂಧಿಸಿದ್ದಾರೆ.