ತೆಂಗಿನ ಮರ ಹತ್ತಿ ಮನೆ ಒಳಗಿಳಿದು ಚಿನ್ನ ಕದ್ದರು

ಸಾಂದರ್ಭಿಕ ಚಿತ್ರ

ಮಂಜೇಶ್ವರ : ತೆಂಗಿನ ಮರವೇರಿ ಟರೇಸಿಗೆ ಇಳಿದ ಕಳ್ಳರು ಮನೆಯೊಳಗಿರಿಸಲಾಗಿದ್ದ ಐದು ಪವನ್ ಚಿನ್ನಾಭರಣವನ್ನು ದೋಚಿದ್ದಾರೆ.ಕಡಂಬಾರು ಶಾಲೆ ಸಮೀಪದ ನಿವಾಸಿ ಗುಜರಿ ವ್ಯಾಪಾರಿ ಮಜೀದ್ ಎಂಬವರ ಮನೆಯಿಂದ ಕಳವು ನಡೆದಿದೆ. ಎರಡು ದಿನದ ಮೊದಲು ಮಜೀದ್ ಗೋವಾಕ್ಕೆ, ಪತ್ನಿ ಮಕ್ಕಳು ತಾಯಿ ಮನೆಗೂ ತೆರಳಿದ್ದರು. ಇದೀಗ ಇವರು ಮನೆಗೆ ಮರಳಿದಾಗ ಕಳವು ನಡೆದಿರುವುದು ಬೆಳಕಿಗೆ ಬಂದಿದೆ.

ಮನೆಯ ಕಪಾಟು ಚೆಲ್ಲಾಪಿಲ್ಲಿಯಾಗಿತ್ತು. ಕಪಾಟಿನೊಳಗಿದ್ದ, ಬಳೆ, ಸರ, ಬ್ರೇಸಿಲೇಟ್ ಸೇರಿದಂತೆ ಐದು ಪವನ್ ಚಿನ್ನಾಭರಣ ಕಳವಾಗಿದೆ.