ಮನೆ ಬೀಗ ಮುರಿದು ಕಳವು

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಉಡುಪಿ : ಮನೆಯ ಬೀಗವನ್ನು ಮುರಿದು ಒಳನುಗ್ಗಿದ ಕಳ್ಳರು 24 ಸಾವಿರ ರೂಪಾಯಿ ಮೌಲ್ಯದ ಚಿನ್ನದ ಸರವನ್ನು ಕಳವುಗೈದಿದ್ದಾರೆ.

ನಗರದ ಹೊರವಲಯದ ಕಿನ್ನಿಮುಲ್ಕಿ ಸಮೀಪದ ಕನ್ನರ್ಪಾಡಿ ಬಾಲಾಜಿ ಲೇಔಟ್ 3ನೇ ಕ್ರಾಸ್ ನಿವಾಸಿ ಆಶ್ವಿನಿ ಐತಾಳ್ ಎಂಬಾಕೆ ಮನೆಯಲ್ಲಿ ಕಳ್ಳತನ ನಡೆದಿದೆ. ಆಶ್ವಿನಿ ಐತಾಳ್ ಸುಮಾರು 6 ತಿಂಗಳ ಹಿಂದೆ ತನ್ನ ಗಂಡನೊಂದಿಗೆ ವಿದೇಶಕ್ಕೆ ಹೋಗಿದ್ದು, ಸೋಮವಾರ ಮನೆಗೆ ಬಂದು ನೋಡಿದಾಗ ಕಳ್ಳತನ  ನಡೆದಿರುವುದು ಗೊತ್ತಾಗಿದೆ.