ಮನೆಗೆಲಸಕ್ಕೆಂದು ಹೋಗಿ ಸೌದಿಯಲ್ಲಿ ಗುಲಾಮರಾದರು

ರಂಜಿತಾರ ಪತಿ ಈಗ ಕರ್ನಾಟಕ ಹೈಕೋರ್ಟಿನಲ್ಲಿ ತನ್ನ ಪತ್ನಿಗಾದ ದಾರುಣ ಸ್ಥಿತಿಗೆ ನ್ಯಾಯಕ್ಕಾಗಿ ಮೊಕದ್ದಮೆ ಹೂಡಿದ್ದಾರೆ.

ಮಾರ್ಚ್ 28ರಂದು ರಂಜಿತಾ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಾಗ ಆಕೆ ಧರಿಸಿದ್ದ ನೈಟಿ ಹರಿದು ಹೋಗಿತ್ತು. ಆಕೆಯ ಕಿವಿಯೋಲೆ, ಕಾಲ್ಗೆಜ್ಜೆಗಳು ಕಣ್ಮರೆಯಾಗಿದ್ದವು. ಪತಿಗೆ ಪತ್ನಿ ಮನೆಗೆ ಬಂದದ್ದೇ ಅವರಿಗೆ ಸಮಾಧಾನ. ಸೌದಿ ಅರೆಬಿಯದಲ್ಲಿ ಎಂಟು ತಿಂಗಳಿಂದ ರಂಜಿತಾ ಗುಲಾಮರಾಗಿದ್ದರು.

ಕಳೆದ ವರ್ಷ ಆಗಸ್ಟ್ 16ರಂದು ರಂಜಿತಾ ದಮ್ಮಂನಲ್ಲಿ ಮನೆಗೆಲೆಸ ಮಾಡಲೆಂದು ಸೌದಿ ಅರೆಬಿಯಕ್ಕೆ ಹೋಗಿದ್ದರು. ತಿಂಗಳಿಗೆ ರೂ 30,000 ವೇತನ ನೀಡುವ ಭರವಸೆ ಆಕೆಗೆ ನೀಡಲಾಗಿತ್ತು.

`ನಾನಿದ್ದ ಕಚೇರಿಯಲ್ಲಿ ಇನ್ನೂ 20 ಭಾರತೀಯ ಮಹಿಳೆಯರಿದ್ದರು. ಬೇರೆ ಬೇರೆ ದೇಶದಿಂದ ಬಂದ ಮಹಿಳೆಯರೂ ಇದ್ದರು. ವ್ಯಕ್ತಿಯೊಬ್ಬ ಬಂದು ಮಧ್ಯವರ್ತಿಯ ಹೆಸರು ಹೇಳುತ್ತಿದ್ದ. ಆತ ಬಂದು ಭಾರತದಿಂದ ಖರೀದಿಸಿದವರನ್ನು ಸಹಿ ಹಾಕಿಸಿಕೊಂಡು ಕರೆದುಕೊಳ್ಳುತ್ತಿದ್ದ. ತಿಂಗಳ ನಂತರ ನಾನು ಮಾಲೀಕರಾದ ಲಾತಿ ಬಳಿ ವೇತನ ಕೇಳಿದರೆ, ಭಾರತದ ಮಧ್ಯವರ್ತಿಗಳಾದ ಮೀರನ್ ಮತ್ತು ಕವಿತಾರಿಂದ ರೂ 3 ಲಕ್ಷಕ್ಕೆ ಖರೀದಿಸಿದ್ದೇನೆ. ಹೀಗಾಗಿ ವೇತನ ನೀಡಬೇಕಾಗಿಲ್ಲ ಎಂದು ಹೇಳಿದ್ದರು’ ಎನ್ನುತ್ತಾರೆ ರಂಜಿತಾ.

ಕೆಲಸದ ಸ್ಥಳಕ್ಕೆ ಹೋಗುವಾಗ ರಂಜಿತಾರ ಕಣ್ಣಿಗೆ ಬಟ್ಟೆ ಕಟ್ಟುತ್ತಿದ್ದ ಕಾರಣದಿಂದ ಸ್ಥಳಗಳನ್ನು ಗುರುತು ಹಿಡಿಯುವುದೂ ಸಾಧ್ಯವಾಗುತ್ತಿರಲಿಲ್ಲ. ಎಂಟು ತಿಂಗಳ ನಂತರ ತನ್ನನ್ನು ಕೂಡಿ ಹಾಕಿದ್ದ ಕಚೇರಿಯಿಂದ ರಂಜಿತಾ ಪರಾರಿಯಾಗಿದ್ದರು. ರಸ್ತೆಗಳಲ್ಲಿ ಬೇಡುವುದು ಬಿಟ್ಟು ಅವರಿಗೆ ಬೇರೆ ದಾರಿಯಿರಲಿಲ್ಲ. ಆದರೆ ರಸ್ತೆಯಲ್ಲಿ ಬೇಡುವುದು ಅಪರಾಧ ಎಂದು ಕೆಲವರು ರಂಜಿತಾಗೆ ಬುದ್ಧಿ ಹೇಳಿ ಪೊಲೀಸ್ ಠಾಣೆಗೆ ಹೋಗಿ ನೆರವು ಕೇಳುವಂತೆ ಸೂಚಿಸಿದ್ದರು.

ಆದರೆ ಪೊಲೀಸರ ಬಳಿಗೆ ಮನೆಗೆಲಸಕ್ಕೆಂದು ಹೋಗಿ ಹೋದ ರಂಜಿತಾಗೆ ಮತ್ತೊಂದು ಹೋರಾಟ ಕಾದಿತ್ತು. ಆಕೆಯನ್ನು ಮಹಿಳೆಯರ ಆಶ್ರಯ ತಾಣದಲ್ಲಿ ಕೂಡಿ ಹಾಕಲಾಯಿತು. 20 ದಿನಗಳೊಳಗೆ ಭಾರತಕ್ಕೆ ಪ್ರವೇಶ ಸಿಗುವ ಆಶ್ವಾಸನೆಯೂ ಸಿಕ್ಕಿತ್ತು. `ಅವರು ನನ್ನ ಪ್ರಯಾಣದ ದಿನವನ್ನು ಮುಂದೂಡುತ್ತಲೇ ಬಂದರು’ ಎನ್ನುತ್ತಾರೆ ರಂಜಿತಾ.

ಕೊನೆಗೆ ಸ್ವತಃ ಟಿಕೆಟು ಖರೀದಿಸಲು ನಿರ್ಧರಿಸಿದ ರಂಜಿತಾಗೆ 1000 ಸೌದಿ ರಿಯಾಲ್ ಬೇಕಿತ್ತು. ಅವರು 600 ರಿಯಾಲ್ ಅನ್ನು ರಸ್ತೆಗಳಲ್ಲಿ ಬೇಡಿದ ತಿಂಗಳಲ್ಲಿ ಉಳಿಸಿಕೊಂಡಿದ್ದರು. ಉಳಿದಂತೆ ಹಾಸ್ಟೆಲಿನಲ್ಲಿದ್ದ ಮಹಿಳೆಯರು, ಸಾಮಾಜಿಕ ಕಾರ್ಯಕರ್ತೆಯ ನೆರವಿನಿಂದ ಟಿಕೆಟ್ ಖರೀದಿಸಿದರು.

ರಂಜಿತಾರ ಪತಿ ಈಗ ಕರ್ನಾಟಕ ಹೈಕೋರ್ಟಿನಲ್ಲಿ ತನ್ನ ಪತ್ನಿಗಾದ ದಾರುಣ ಸ್ಥಿತಿಗೆ ನ್ಯಾಯಕ್ಕಾಗಿ ಮೊಕದ್ದಮೆ ಹೂಡಿದ್ದಾರೆ. ರಂಜಿತಾ ಮರಳಿ ಬಂದ ಮೇಲೆ ಸಂಜಯನಗರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರೂ ಪೊಲೀಸರು ಕ್ರಮ ಕೈಗೊಂಡಿರಲಿಲ್ಲ. ಎಫ್ ಐ ಆರ್ ತೆಗೆದುಕೊಳ್ಳಲೇ ಅವರು ಒಪ್ಪಿರಲಿಲ್ಲ. ಡಿಜಿಪಿ, ಸಂಸದರು, ಶಾಸಕರು, ಗೃಹಸಚಿವರು ಮತ್ತು ವಿದೇಶಾಂಗ ಸಚಿವರು ಹಾಗೂ ಪ್ರಧಾನಿ ಮೋದಿಗೂ ಪತ್ರ ಬರೆದರೂ ಯಾರೂ ನ್ಯಾಯಕ್ಕೆ ನೆರವು ನೀಡಿಲ್ಲ ಎನ್ನುತ್ತಾರೆ ರಂಜಿತಾ.

“ಹಾಸ್ಟೆಲಿನಲ್ಲಿ ಇನ್ನೂ 1500 ಮಂದಿ ಇದ್ದಾರೆ. ಈ ಜಾಲವನ್ನು ತಡೆಯಲು ಯಾರೂ ಮುಂದೆ ಬರುತ್ತಿಲ್ಲ“ ಎಂದು ಅವರು ವಿಷಾದ ವ್ಯಕ್ತಪಡಿಸುತ್ತಾರೆ.

LEAVE A REPLY