ಒಂದು ಕೈಯಲ್ಲಿ ನೀಡಿ ಇನ್ನೊಂದು ಕೈಯಲ್ಲಿ ಕಿತ್ತುಕೊಳ್ಳುತ್ತಿದ್ದಾರೆ

ವರ್ಷದ ಕೊನೆಯಲ್ಲಿ ಭಾಷಣ ಮಾಡಿದ ಪ್ರಧಾನಿ ಮೋದಿ ತಾನು ಜನರಿಗೆ ನೀಡಿದ ಹೊಡೆತದ ಗಾಯ  ಬಾಸುಂಡೆಗಳಿಗೆ ಮುಲಾಮು ಹಚ್ಚುವ ಕೊಡುಗೆ ಪ್ರಕಟಿಸಿದ್ದರೆ  ಆದಾದ ಕೆಲವೇ ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಳ ಮಾಡಿ ಹೊಸ ವರ್ಷದ ಬರೆಯ ಕೊಡುಗೆ ನೀಡಿದ್ದಾರೆ  ಒಂದು ಕೈಯಲ್ಲಿ ನೀಡಿ ಇನ್ನೊಂದು ಕೈಯಲ್ಲಿ ಕಿತ್ತುಕೊಳ್ಳುವ ಈ ವಿಧಾನ ನರೇಂದ್ರ ಮೋದಿಯವರಿಗೆ ಕರತಲಾಮಲಕವಾಗಿದೆ ಎಂಬ ಭಾವನೆ ಬರುತ್ತಿದೆ
ಅಂತರರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಹೆಚ್ಚಳವಾಗಿರುವುದರಿಂದ ತೈಲದ ಬೆಲೆ ಏರಿಳಿತವಾಗುತ್ತಿದೆ ಎಂದು ಸಾಮಾನ್ಯ ಸಬೂಬನ್ನು ನೀಡಲಾಗುತ್ತದೆ  ಆದರೆ ನಾವು ಇಂಧನಕ್ಕೆ ತೆರುವ ಹಣದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಹೋಗುವ ತೆರಿಗೆಯ ಭಾಗ ಮುಕ್ಕಾಲು ಭಾಗ ಇದೆ ಎನ್ನುವುದನ್ನು ಮರೆಮಾಚಲಾಗುತ್ತಿದೆ
ಪೆಟ್ರೋಲ್  ಡೀಸೆಲ್‍ಗೆ ವಿಧಿಸಲಾಗುವ ತೆರಿಗೆ ಸೆಸ್ ಹಣದಿಂದಲೂ ಆದಾಯ ಇದೆ  ಇಷ್ಟೆಲ್ಲ ಆದಾಯ ಗಳಿಸಿ ಭಾರತ ಸರಕಾರಕ್ಕೆ ಮಾಡುವುದೇನಿದೆ   ಜನರಿಂದ ಸುಲಿದು  ಸುಲಿದು ಬೊಕ್ಕಸ ಭರ್ತಿ ಮಾಡುವುದರಿಂದ ಆಗುವ ಲಾಭವಾದರೂ ಏನು

  • ಮನೋಹರ  ಕಂಕನಾಡಿ