ಇವರು ಪರಿಸರ ಸ್ನೇಹಿಗಳು

ದೇಶದ ಪರಿಸರ ಸ್ವಚ್ಛತೆಗೆ ಸವಾಲಾಗಿರುವುದು ಅಜೈವಿಕ ತ್ಯಾಜ್ಯಗಳು. ನಮ್ಮ ದಿನ ನಿತ್ಯದ ದಿನಚರಿಯಲ್ಲಿ ಪ್ಲಾಸ್ಟಿಕ್ ಬಳಕೆಯಾಗುತ್ತಿದೆ. ಕಸದ ತೊಟ್ಟಿಗಳಲ್ಲಿ, ರಸ್ತೆ ಚರಂಡಿ, ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲೆಂದರಲ್ಲಿ ಬಿದ್ದಿರುತ್ತವೆ. ಅವುಗಳನ್ನು ಆರಸಿ ಗುಜರಿ ಅಂಗಡಿಗಳಿಗೆ ಮಾರಾಟ ಮಾಡಿ ಬದುಕು ಸಾಗಿಸುವವರು ಗುಜುರಿ ಹೆಕ್ಕುವವರು ಅಥವಾ ಚಿಂದಿ ಆರಿಸುವವರು ಒಂದು ನೆಲೆಯಲ್ಲಿ ಇವರು ಪರಿಸರ ಸ್ನೇಹಿಗಳೆಂದು ಕರೆದರೆ ತಪ್ಪಾಗಲಾರದು ಪರಿಸರಕ್ಕೆ ಮಾರಕವಾಗಿರುವ, ನಾವು ಕಸವೆಂದು ಪರಿಗಣಿಸಿ ಎಸೆದ ಪ್ಲಾಸ್ಟಿಕ್ ನೀರಿನ ಬಾಟಲಿ ಲೋಟ, ಪ್ಲಾಸ್ಟಿಕ್ ಕೈಚೀಲ ಇನ್ನಿತರ ವಸ್ತುಗಳನ್ನು ಗುಜುರಿ ಹೆಕ್ಕುವವರು ಆರಿಸಿ ಗುಜರಿ ಅಂಗಡಿಗೆ ಮಾರಟ ಮಾಡುತ್ತಾರೆ. ಇವರ ಈ ವೃತ್ತಿಯಿಂದ ಇವರ ಜೀವನವು ಸಾಗುತ್ತದೆ. ಈ ವೃತ್ತಿ ಅವಲಂಬಿಸಿ ದೇಶದಲ್ಲಿ ಲಕ್ಷಾಂತರ ಕುಟುಂಬಗಳು ಜೀವನ ನಿರ್ವಹಣೆ ಮಾಡುತ್ತಿವೆ. ಇವರು ಅನಿವಾರ್ಯ ಪರಿಸ್ಥಿತಿಯಲ್ಲಿ ಈ ವೃತ್ತಿ ಮಾಡುತ್ತಿದ್ದಾರೆ. ತಮ್ಮ ಆರೋಗ್ಯ ಪಣಕ್ಕಿಟ್ಟು, ಕೊಳೆತು ನಾರುವ ಕಸದ ರಾಶಿಗಳಲ್ಲೇ ಇವರ ವೃತ್ತಿ ಬದುಕು ಸಾಗುತ್ತದೆ ಗುಜರಿ ಹೆಕ್ಕುವರಿಂದಾಗಿ ಅದೇಷ್ಟೋ ಪರಿಸರ ಭೂಗರ್ಭಕ್ಕೆ ಮಾರಕವಾದ ಅಜೈವಿಕ ತ್ಯಾಜ್ಯಗಳು ಮರುಪೂರಣಕ್ಕೆ ಸಾಗುತ್ತಿದೆ. ಕಸ ವಿಲೇವಾರಿ ಸಮಸ್ಯೆಗೆ ಇವರ ದೊಡ್ಡ ಮಟ್ಟದ ಸಹಕಾರ ಇದೆ ಎನ್ನಬಹುದು ವಿಪರ್ಯಾಸದ ಸಂಗತಿ ಎಂದರೆ, ಸಾರ್ವಜನಿಕ ವಲಯದಲ್ಲಿ ಇವರನ್ನು ಅಗೌರವದಿಂದ ಕಾಣುವವರು ಹೆಚ್ಚು ಪರಿಸರ ಸ್ನೇಹಿಗಳಾದ ಚಿಂದಿ ಆರಿಸುವವರಿಂದ ಪರಿಸರಕ್ಕಾಗುವ ಒಳಿತಿನ ಕುರಿತು ಯಾರೂ ಚಿಂತಿಸುವುದಿಲ್ಲ ಎಲ್ಲೋ ಒಂದು ಕಡೆ ಗುಜುರಿ ಆರಿಸುವ ಕೆಲವವರು ಮನೆ ವಠಾರ ಪ್ರವೇಶ ಮಾಡಿ ಕೊಡಪಾನ ಇನ್ನಿತರ ಪರಿಕರಗಳ ಕಳ್ಳತನ ಮಾಡಿದ ಘಟನೆಗಳು ನಡೆಯುತ್ತವೆ ಹಾಗಾಗಿ ಗುಜರಿ ಆರಿಸುವವರು ರಸ್ತೆಯಲ್ಲಿ ಸಂಚರಿಸುವಾಗ ಮನೆ ಮಂದಿಗೆ ಭಯ ಕಾಡುವುದುಂಟು ಆದರೆ ಎಲ್ಲರೂ ಅದೇ ರೀತಿ ಇರುತ್ತಾರೆಂದು ಹಣೆ ಪಟ್ಟಿ ಕೊಡುವುದು ತಪ್ಪಾಗುತ್ತದೆ ಗುಜುರಿ ಹೆಕ್ಕುವರಿಂದ ಏನು ಲಾಭ ಪರಿಸರ ಸ್ವಚ್ಛತೆ ಸುಲಭ ಎಂದು ಈ ಪರಿಸರ ಸ್ನೇಹಿಗಳನ್ನು ಸಂಭೋಧಿಸಿದರೂ ತಪ್ಪಲ್ಲ ಸ್ವಚ್ಛ ಭಾರತ ಪರಿಕಲ್ಪನೆಗೆ ಇವರ ಕೊಡುಗೆಯೂ ಇದೆ ಎನ್ನಬಹುದು

  • ತಾರಾನಾಥ್ ಮೇಸ್ತ
    ಶಿರೂರು 7760421868