ನಿಜ ಜೀವನದಲ್ಲಿ ಆಪತ್ಕಾರಿ ಈ ಸಿನೆಮಾ ಸಂದೇಶಗಳು

ನಾಯಕನಟ ಹೊಡೆಯುತ್ತಿದ್ದ ಹಾಗೇ ವಿಲನ್ ಪಾತ್ರಧಾರಿಗಳು ಹಾರಿ ಬೀಳುತ್ತಿರುವುದು

ಸಿನಿಮಾದಲ್ಲಿ ಹೀರೋಗಳು ಯಾವತ್ತೂ ಕಾನೂನಿಗಿಂತ ಮೇಲೆ. ಕಾನೂನು ಮುರಿಯುವುದು ಅವರಿಗೆ  ಚಿಟಕಿ ಹೊಡೆದಷ್ಟು ಸುಲಭ. ಆದರೆ ಕೆಲವೊಂದು ಬಾರಿ ಇದು  ಜೀವಕ್ಕೇ ಅಪಾಯವೊಡ್ಡಬಹುದು.

 

ಸಿನೆಮಾಗಳು ನಮ್ಮ ಜೀವನದ ಮೇಲೆ ಹಲವು ರೀತಿಯಲ್ಲಿ ಪ್ರಭಾವ ಬೀರುತ್ತವೆ. ಕೆಲವರಂತೂ ಸಿನೆಮಾಗಳು ತಮ್ಮ ಜೀವನದ ಮಾರ್ಗದರ್ಶಿ ಎಂದೇ ತಿಳಿಯಲು ಆರಂಭಿಸುತ್ತಾರೆ. ಆದರೆ ನಿಜ ಹೇಳಬೇಕೆಂದರೆ ಜೀವನ ಹೇಗೆ ಸಾಗಿಸಬೇಕೆಂಬ ಬಗ್ಗೆ ಸಿನೆಮಾಗಳು ಹೆಚ್ಚಿನ ಬಾರಿ ನಮಗೆ ತಪ್ಪು ಸಲಹೆಗಳನ್ನೇ ನೀಡುತ್ತವೆ. ಸಾಮಾನ್ಯವಾಗಿ ಸಿನೆಮಾಗಳಲ್ಲಿ  ಕಂಡುಬರುವ ದೃಶ್ಯಗಳು ಹಾಗೂ ಕೇಳಲಾಗುವ ಡೈಲಾಗುಗಳ ಬಗ್ಗೆ ಇಲ್ಲಿ ನೀಡಲಾಗಿದೆ. ನೆನಪಿಡಿ. ಇವುಗಳನ್ನು ನೀವು ಹೆವಿ ಡಿಸ್ಕೌಂಟಿನೊಂದಿಗೆ ಸ್ವೀಕರಿಸಬೇಕು.

  1. ``ಹಿಂದಕ್ಕೆ ಸರಿಯಿರಿ, ನಾನು ಒಬ್ಬನೇ ಇದನ್ನು ಮಾಡುತ್ತೇನೆ.”

ಆರ್ನೋಲ್ಡ್ ಶೆರ್ವಾಝೆನೆಗ್ಗರ್ ಅವರ ಟರ್ಮಿನೇಟರಿನಿಂದ ಹಿಡಿದು ನಮ್ಮದೇ ಆದ ಶೆಹನಶಾ ಮತ್ತು ಕೃಷ್, ಎಲ್ಲರೂ ಒಂಟಿ ಹೀರೋ ಚಿತ್ರಗಳಿಂದ ಪ್ರೇರಿತರಾಗಿದ್ದಾರೆ. ಆದರೆ ನಿಜ ಜೀವನದಲ್ಲಿ ಹಾಗೆ ಸಾಧ್ಯವಿಲ್ಲ. ಜೀವನದಲ್ಲಿ ಮುಂದೆ ಬರಲು, ಏನಾದರೂ ಸಾಧನೆ ಮಾಡಲು ನಮಗೆ ಇತರರ ಸಹಾಯವಿಲ್ಲದೆ ಅಸಾಧ್ಯ.

  1. “ತರ್ಕ ಮರೆತು ನಿಮ್ಮ ಹೃದಯ ಕರೆಗೆ ಓಗೊಡಿ”

ಇದು ಒಂದು ಉತ್ತಮ ಸಲಹೆಯಾದರೂ ಎಲ್ಲಾ ಸಂದರ್ಭಗಳಲ್ಲಿ ಅದು ಸರಿ ಬಾರದು. ಇಂತಹ ಕ್ರಮವನ್ನು ಜೂಜುಗಾರರು ಹಾಗೂ ಕಳೆದುಕೊಳ್ಳಲು ಏನೂ ಇಲ್ಲದವರು ಕೈಗೊಳ್ಳುತ್ತಾರೆ. ಪರಿಸ್ಥಿತಿಯನ್ನು ಅವಲೋಕಿಸಿ, ಇತರರ ಸಲಹೆಗಳನ್ನು ಆಲಿಸಿ  ಹಾಗೂ ಇನ್ನಿತರ ಹಲವಾರು ವಿಚಾರಗಳನ್ನು ಗಣನೆಗೆ ತೆಗೆದುಕೊಂಡೇ ಯಾವುದಾದರೂ ಕೆಲಸಕ್ಕೆ ಧುಮುಕಬೇಕು.

  1. “ಯಾವತ್ತೂ ನಿಮಗಾಗದ್ದನ್ನು ಧಿಕ್ಕರಿಸಿ”

ಇಂತಹ ಸಲಹೆ ನಮ್ಮನ್ನು ತೊಂದರೆಯಲ್ಲಿ ಸಿಲುಕಿಸುತ್ತದೆ. `ನಿಮ್ಮ ನೌಕರಿ ನಿಮಗೆ ಇಷ್ಟವಿಲ್ಲದೇ ಇದ್ದರೂ ತ್ಯಜಿಸಬೇಡಿ’ `ಎಲ್ಲ ಭಾರವನ್ನೂ ದೇವರ ಮೇಲೆ ಹಾಕಿ’ ಎಂಬಿತ್ಯಾದಿ ಸಲಹೆಗಳು ನಿಮಗೆ ನಿಮ್ಮ ಕುಟುಂಬ ಹಾಗೂ ಸ್ನೇಹಿತರು ನೀಡಿರಬಹುದು. “ಯಾವತ್ತೂ ನಿಮಗಾಗದ್ದನ್ನು ಧಿಕ್ಕರಿಸಿ” ಎಂಬಂತಹ ಸಲಹೆ ಪಾಲಿಸಿದರೆ ಅದು ನಿಮಗೇ ತಿರುಗೇಟು ನೀಡಬಹುದು.

  1. “ನಾನು ಯಾರೆಂದು ಜಗತ್ತು ತಿಳಿಯಲು ನಾನು ಬಯಸುವುದಿಲ್ಲ”

ಸೂಪರ್ ಹೀರೋ ಹಾಗೂ ಸ್ಪೈ ಚಿತ್ರಗಳು ಹೇಳುವ ನೀತಿಯಿದು. ಇವುಗಳ ಪ್ರಕಾರ ನಿಮ್ಮ ಪ್ರತಿಭೆ ಹಾಗೂ ಗುರಿಯೆಲ್ಲವನ್ನೂ ಅಡಗಿಸಿ ಎರಡು ವಿಧದ ಜೀವನವನ್ನು ನಿಮ್ಮ ಕುಟುಂಬಕ್ಕಾಗಿ ಜೀವಿಸಬೇಕು. ಇದು ತಪ್ಪು. ನಿಮ್ಮ ಶಕ್ತಿಯನ್ನು ಒಳ್ಳೆಯ ಉದ್ದೇಶಗಳಿಗೆ ಬಳಿಸಿ. ಅದರಿಂದ ಸಿಗುವ ಸಂತಸ ಅಪಾರ.

  1. “ನಿಮಗೆ ಬೇರೇನೂ ಬೇಕಾಗಿಲ್ಲ, ಕೇವಲ ಅದೃಷ್ಟ”

ಕುಂಗ್ ಫು ಪಂಡ 1ದÀಲ್ಲಿ  ಮಾಸ್ಟರ್ ಊಗ್ವೆ ಡ್ರಾಗನ್ ವಾರಿಯರನನ್ನು ಆಯ್ಕೆ ಮಾಡುತ್ತಿರುವಾಗ  ಪೋ ಆಗಸದಿಂದ ಬೀಳುವ ದೃಶ್ಯ ನಮಗೆ ಖುಷಿ ನೀಡುತ್ತದೆ. ಸಿನಿಮಾಗಳಲ್ಲಿ ಅದೃಷ್ಟವಂತ ವ್ಯಕ್ತಿಯೊಬ್ಬ ಒಮ್ಮೆಗೇ ಕೋಟಿಗಟ್ಟಲೆ ಆಸ್ತಿ ಪಡೆಯುತ್ತಾನೆ. ನಾವು ಬಯಸಿದ್ದು ನಮ್ಮ ಬಳಿ ಬಂದು ಬೀಳುವುದು ಬಿಡಿ ಅದನ್ನು ನಮ್ಮದಾಗಿಸಲು  ಪಡಬೇಕಾದ ಶ್ರಮವೆಷ್ಟು ?

  1. “ನೀನು ಸೈಲಂಟ್ ಆಗು, ಇಲ್ಲವೇ ನಾನು ವಾಯ್ಲೆಂಟ್ ಆಗುತ್ತೇನೆ”

ನಿಜ ಜೀವನದಲ್ಲಿ ಇತರರನ್ನು ಮೌನವಾಗಿಸುವುದು ಉತ್ತಮರ ಲಕ್ಷಣವಲ್ಲ. ನಮ್ಮ ಬಗ್ಗೆ ಇತರರು ಮಾಡುವ ವಿಮರ್ಶೆ ಹಾಗೂ ಟೀಕೆಗಳು ಹಲವು ಬಾರಿ ನಮ್ಮ ಪ್ರಗತಿಗೆ ರಹದಾರಿಯಿದ್ದಂತೆ. ನಿಮ್ಮನ್ನು ಯಾರಾದರೂ ಟೀಕಿಸಿದರೆ, ಮುಂದಿನ ಬಾರಿ ನಿಮ್ಮ ಕಾರ್ಯನಿರ್ವಹಣೆ ಉತ್ತಮಗೊಳಿಸಲು ನೀವು ಪ್ರಯತ್ನಿಸುವಿರೆಂದು ಹೇಳಿ ಅವರಿಗೆ ಧನ್ಯವಾದ ತಿಳಿಸಿ.

  1. “ನಿಯಮ ಉಲ್ಲಂಘಿಸಿದರೆ ನೀವು ಮಹಾನ್ ಆಗುತ್ತೀರಿ”

ಸಿನಿಮಾದಲ್ಲಿ ಹೀರೋಗಳು ಯಾವತ್ತೂ ಕಾನೂನಿಗಿಂತ ಮೇಲೆ. ಕಾನೂನು ಮುರಿಯುವುದು ಅವರಿಗೆ  ಚಿಟಕಿ ಹೊಡೆದಷ್ಟು ಸುಲಭ. ಆದರೆ ಕೆಲವೊಂದು ಬಾರಿ ಇದು  ಜೀವಕ್ಕೇ ಅಪಾಯವೊಡ್ಡಬಹುದು. ಉದಾ. ಫುಟ್ಪಾತ್ ಇದ್ದೂ ರಸ್ತೆಯಲ್ಲಿಯೇ ನಡೆಯಲು ಯತ್ನಿಸಿದರೆ ನಿಮ್ಮ ಜೀವಕ್ಕೆ ನೀವೇ ಅಪಾಯವೊಡ್ಡಿದಂತೆ.