ಸ0ಭ್ರಮದಲ್ಲೂ ಸಂವೇದನೆ ಸುವಿಚಾರ ಇರಬೇಕೆನ್ನುವುದನ್ನು ಮರೆಯಬಾರದು

ಹೊಸ ವರ್ಷಾಚರಣೆ ಸಂದರ್ಭ ಬೆಂಗಳೂರಿನಲ್ಲಿ ಅನೇಕ ಕಡೆ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ದುರದೃಷ್ಟಕರ ಎಂಬ ಚರ್ಚೆ ಎಲ್ಲಾ ಕಡೆ ನಡೆಯುತ್ತಿದೆ  ಪ್ರತಿಯೊಬ್ಬರೂ ಅವರದೇ ಆದ ಅಭಿಪ್ರಾಯವನ್ನು ಅವರವರ ದೃಷ್ಟಿಕೋನದಲ್ಲಿ ಪರ  ವಿರೋಧ ಕೊಡುತ್ತಿದ್ದಾರೆ  ಆದರೆ ಇಂತಹ ದೌರ್ಜನ್ಯ ನಡೆಯಲು ಮೂಲಕಾರಣ ಹುಡುಕಬೇಕಾಗಿದೆ  ಹೆಣ್ಣು ಮಕ್ಕಳು ರಾತ್ರಿ ಹನ್ನೆರಡದ ಮೇಲೂ ಪಾರ್ಟಿ ಮಾಡುತ್ತಾ ಮಜಾ ಮಾಡುವ ಅಗತ್ಯ ಇದೆಯೇ   ಇದಕ್ಕೇ ಅವರ ಪೋಷಕರು ಹಣ ಕೊಟ್ಟು ರಸ್ತೆಯಲ್ಲಿ ಮೈಮರೆತು ಕುಣಿಯಲು ಕಳಿಸಿರುತ್ತಾರೆಯೇ   ನಡುರಸ್ತೆಯಲ್ಲಿ ತಡರಾತ್ರಿ ಕುಣಿಯುವುದು ಸಂಭ್ರಮಾಚರಣೆಯೇ   ಇಂತಹ ಕೆಲ ಪ್ರಶ್ನೆಗಳನ್ನು ಹೆಣ್ಣು ಮಕ್ಕಳು ತಮಗೆ ತಾವೇ ಹಾಕಿಕೊಳ್ಳಬೇಕು
ಬೆಂಗಳೂರಿನಲ್ಲಿ ಕುಡಿದು ಕುಪ್ಪಳಿಸಿದ ಈ ಯುವಕರು ಸ್ವಚ್ಛತಾ ಆಂದೋಲನ ಹಮ್ಮಿಕೊಂಡು ತಾವಿರುವ ಏರಿಯಾವನ್ನು ಸ್ವಚ್ಛ ಮಾಡಿದ್ದರೆ ಬೆಂಗಳೂರು ಹೊಸ ವರ್ಷಕ್ಕೆ ಸುಂದರ ನಗರವಾಗಿ ಕಾಣುತ್ತಿತ್ತಲ್ಲವೇ  ಸಂಭ್ರಮದಲ್ಲೂ ಸಂವೇದನೆ ಸುವಿಚಾರಗಳು ಇರಬೇಕೆನ್ನುವುದನ್ನು ಮರೆಯಬಾರದು

  • ಅನುಪಮಾ ಸುವರ್ಣ
    ಕುದ್ರೋಳಿ ಮಂಗಳೂರು