ಶಾಲೆ ಹೈಟೆಕ್ ಮಾಡುವ ಮೊದಲು ಮನಸ್ಸು ಪರಿವರ್ತನೆಯಾಗಲಿ : ಈಶ್ವರ ಮಾಸ್ಟರ್

ಸಭೆಯಲ್ಲಿ ಮಾತಾಡಿದ ಈಶ್ವರ ಮಾಸ್ಟರ್

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : “ಮನೋಭಾವ ಬದಲಾಗಿ ಪ್ರಕೃತಿಗನುಸಾರ ಜೀವಿಸಲು ಕಲಿತವನೇ ನಿಜವಾದ ಮಾನವ. ಅಂತಹವನ ಮಾನವೀಯತೆಯನ್ನು ಯಾರಿಂದಲೂ ಅಳೆಯಲು ಸಾಧ್ಯವಿಲ್ಲ. ನಮ್ಮ ಉದ್ದೇಶವೆಲ್ಲಾ ಹೈಟೆಕ್ ಎಂದಿರುವಾಗ ಈ ಹೈಟೆಕ್ ಮನಸ್ಸು ನಮ್ಮಲ್ಲಿ ಯಾಕೆ ಸೃಷ್ಟಿ ಮಾಡಬಾರದು” ಎಂದು ನಿವೃತ ಅಧ್ಯಾಪಕ ಈಶ್ವರ ಮಾಸ್ಟರ್ ಹೇಳಿದರು.

ಕುಂಜತ್ತೂರು ಶಾಲೆಯಲ್ಲಿ ಜರುಗಿದ ಹಳೆ ವಿದ್ಯಾರ್ಥಿ ಸಂಗಮದಲ್ಲಿ ಅವರು ಮಾತನಾಡಿದರು.

ಸ್ಮಾರ್ಟ್ ತರಗತಿಗಳಿಗಾಗಿ ಸೌಕರ್ಯ ನೀಡುತ್ತಿರುವ ಸರಕಾರದ ಯೋಜನೆಯಿಂದ ಮೂಲಭೂತ ಸೌಕರ್ಯಯಗಳಿಲ್ಲದೆ ಸ್ಮಾರ್ಟ್ ತರಗತಿಗಳಿಂದ ವಂಚಿತವಾಗುತ್ತಿರುವ ಕುಂಜತ್ತೂರು ಹೈಯರ್ ಸೆಕಂಡರಿ ಶಾಲೆಗೆ ಸಹಕಾರಿಯಾಗಲು ಪೂರ್ವ ವಿದ್ಯಾರ್ಥಿಗಳ ಸಂಗಮ ಏರ್ಪಡಿಸಲಾಗಿತ್ತು. ಹಲವಾರು ಹಳೆಯ ವಿದ್ಯಾರ್ಥಿಗಳು ಪಾಲ್ಗೊಂಡರು.