ಜ್ಯುವೆಲ್ಲರಿ ಗೋಡೆ ಕೊರೆದು ಕಳವು

ಸಾಂದರ್ಭಿಕ ಚಿತ್ರ

ಕಾಸರಗೋಡು : ಬಂದಡ್ಕದಲ್ಲಿ ಜ್ಯುವೆಲ್ಲರಿಯೊಂದರ ಗೋಡೆ ಕೊರೆದು ಒಳ ನುಗ್ಗಿದ ಕಳ್ಳರು ಒಂದು ಕಿಲೋ ಚಿನ್ನಾಭರಣ ಹಾಗು ನಾಲ್ಕು ಕಿಲೋ ಬೆಳ್ಳಿಯನ್ನು ಕದ್ದೊಯ್ದಿದ್ದಾರೆ.

ಬಂದಡ್ಕ ನಗರದಲ್ಲಿ ಕಾರ್ಯಾಚರಿಸುತ್ತಿರುವ ಸುಮಂಗಲಿ ಜ್ಯುವೆಲ್ಲರಿಯಲ್ಲಿಯೇ ಈ ಕಳವು ನಡೆದಿದ್ದು ಗುರುವಾರ ಬೆಳಿಗ್ಗೆ ಜ್ಯುವೆಲ್ಲರಿ ಕಟ್ಟಡದ ಹಿಂಭಾಗದಲ್ಲಿರುವ ಗೋಡೆ ಮುರಿದ ರೀತಿಯಲ್ಲಿ ಕಂಡುಬಂದಿದೆ. ಮಾಹಿತಿ ಅರಿತು ಕಾಸರಗೋಡು ಡಿವೈಎಸ್ಪಿ ಸಹಿತ ಉನ್ನತ ಪೆÇಲೀಸ್ ಅಧಿಕಾರಿಗಳು ಸ್ಥಳಕ್ಕಾಗಮಿಸಿ ತನಿಖೆ ನಡೆಸಿದ್ದಾರೆ.