ಜನ ಮನೆಯೊಳಗಿದ್ದಾಗಲೇ ಕಳವು

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಬಜ್ಪೆ ಠಾಣಾ ವ್ಯಾಪ್ತಿಯ ಕುಪ್ಪೆಪದವು ಚರ್ಚ್ ರಸ್ತೆ ನಿವಾಸಿ ಮಹಮ್ಮದ್ ಇಕ್ಬಾಲ್ ಎಂಬವರ ಮನೆಗೆ ನುಗ್ಗಿದ ಕಳ್ಳರು ಸುಮಾರು 14 ಲಕ್ಷ ರೂ ಮೌಲ್ಯದ ಚಿನ್ನದ ಒಡವೆ ಕಳವು ಮಾಡಿ ಪರಾರಿಯಾಗಿದ್ದಾರೆ. ಹಿಂಭಾಗದ ಕಿಟಕಿ ಸಂದಿಯಿಂದ ಬಾಗಿಲನ್ನು ತೆರೆದು ಒಳನುಗ್ಗಿದ್ದಾರೆ.

ಮನೆಮಂದಿ ಮನೆಯೊಳಗೆ ಇದ್ದ ಸಂದರ್ಭದಲ್ಲಿಯೇ ರಾತ್ರಿ 2ರಿಂದ 3 ಗಂಟೆಯ ನಡುವೆ ಈ ಕೃತ್ಯ ನಡೆದಿದೆ. ಯಾರೋ ಕಳ್ಳರು ಓಡಾಡಿದ ಅನುಭವಾಗಿ ಲೈಟ್ ಹಾಕುತ್ತಿದ್ದಂತೆ ಕಳ್ಳರು ಓಡಿ ಪರಾರಿಯಾಗಿದ್ದಾರೆ.

ಮಹಮ್ಮದ್ ಇಕ್ಬಾಲ್ ನಾದಿನಿ ನಾಜಿಯಾ ಅವರ ಬೆಡ್‍ರೂಮಿನಲ್ಲಿರುವ ಕಪಾಟಿನಲ್ಲಿದ್ದ ನೆಕ್ಲೇಸ್, 11 ಬಳೆಗಳು, 12 ಉಂಗುರಗಳು, ಸೇರಿದಂತೆ ಒಟ್ಟು