ಪೊಲೀಸ್ ಮನೆಯಿಂದಲೇ ಚಿನ್ನಾಭರಣ ಕಳವು !

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಪಾಂಡೇಶ್ವರ ಪೊಲೀಸ್ ಲೇನ್ ಕ್ವಾಟರ್ಸ್ ಬಿ ಬ್ಲಾಕಿನಲ್ಲಿರುವ ಡಿಎಆರ್ ಹೆಡ್ ಕಾನ್ಸಟೆಬಲ್ ಸುಧೀರ್ ಕುಮಾರ್ ಅವರ ಮನೆಗೆ ನುಗ್ಗಿದ ಕಳ್ಳ ಚಿನ್ನಾಭರಣ ಕಳವು ಮಾಡಿದ್ದಾನೆ.

ಸುಧೀರ್ ಕುಮಾರ್ ಅವರು ಮನೆಗೆ ಬೀಗ ಹಾಕಿ ಕೊಲ್ಯ ಕನೀರ್ ತೋಟದ ಗೃಹ ಪ್ರವೇಶಕ್ಕೆ ಹಾಗೂ ಅವರ ತಾಯಿ ಆಸ್ಪತ್ರೆಗೆ ದಾಖಲಾಗಿರುವ ಪುತ್ರಿಯ ಆರೈಕೆಗೆ ಹೋಗಿದ್ದ ಸಂದರ್ಭದಲ್ಲಿ ಈ ಕಳವು ಕೃತ್ಯ ನಡೆದಿದೆ.