ಗೂಡಂಗಡಿಯಿಂದ ಕಳವು

ಪುತ್ತೂರು : ಇಲ್ಲಿನ ಬೈಪಾಸ್ ಬಳಿ ಇರುವ ಗೂಡಂಗಡಿಯೊಂದಕ್ಕೆ ನುಗ್ಗಿದ ಕಳ್ಳರು ಅದರಲ್ಲಿದ್ದ 7 ಸಾವಿರ ನಗದು ಮತ್ತು 30 ಪ್ಯಾಕೆಟ್ ಸಿಗರೇಟನ್ನು ಕಳವು ಮಾಡಿರುವ ಘಟನೆ ನಡೆದಿದೆ.

ಅಂಗಡಿಯ ಹಿಂಬಾಗವನ್ನು ಒಡೆದು ಹಾಕಿದ ಕಳ್ಳರು ಅಂಗಡಿಯ ಡ್ರಾಯರಿನಲ್ಲಿದ್ದ ಹಣವನ್ನು ದೋಚಿದ್ದಾರೆ. ಬೈಪಾಸ್ ರಸ್ತೆ ಬದಿಯಲ್ಲೇ ಈ ಅಂಗಡಿಯಿದ್ದು ರಾತ್ರಿ ವೇಳೆ ಪೊಲೀಸರು ಗಸ್ತು ತಿರುಗುತ್ತಿದ್ದರೂ ಪೊಲೀಸರ ಗಮನಕ್ಕೆ ಬರಲಿಲ್ಲ. ಇದೇ ಅಂಗಡಿಯಲ್ಲಿ ಈ ಹಿಂದೆಯೂ ಕಳವು ನಡೆದಿತ್ತು. ಘಟನೆಯ ಕುರಿತು ಅಂಗಡಿ ಮಾಲಕ ಪೂವಪ್ಪ ನಗರ ಪೊಲೀಸರಿಗೆ ದೂರು ನೀಡಿದ್ದಾರೆ.