ಕಳವು ಆರೋಪಿ ಅರೆಸ್ಟ್

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಅಂಗಡಿ ಮಳಿಗೆಗಳಿಗೆ ನುಗ್ಗಿ ನಗದು, ಸೊತ್ತುಗಳನ್ನು ಕಳವು ಮಾಡುತ್ತಿದ್ದ ಆರೋಪಿ ತಮಿಳುನಾಡಿನ ವಿಒಸಿ ನಗರದ ಎಸ್ ಸೆಲ್ವಕುಮಾರ(32)ನನ್ನು ಕದ್ರಿ ಪೊಲೀಸರು ಬಂಧಿಸಿ ಮೂರು ಬ್ಯಾಟರಿಗಳನ್ನು ವಶಪಡಿಸಿಕೊಂಡಿದ್ದಾರೆ.

ಮಾ 3ರಂದು ಬೆಂದೂರುವೆಲ್ ಕಟ್ಟಡವೊಂದರಲ್ಲಿ ಇರುವ ಬ್ಯಾಟರಿ ಅಂಗಡಿಯಿಂದ ಬ್ಯಾಟರಿಗಳು ಕಳವಾದ ಬಗ್ಗೆ ಮಾಲಕ ಅನಂತಕೃಷ್ಣ ಕದ್ರಿ ಪೊಲೀಸರಿಗೆ ದೂರು ನೀಡಿದ್ದರು.

ಎ 2ರಂದು ಕಂಕನಾಡಿ ಪರಿಸರದಲ್ಲಿ ಅನುಮಾನಾಸ್ಪದವಾಗಿ ತಿರುಗಾಡಿಕೊಂಡಿದ್ದ ಈತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದಾಗ ಕಳವು ಕೃತ್ಯ ಬೆಳಕಿಗೆ ಬಂದಿದೆ. ಕಾವೂರು ಠಾಣೆಯಲ್ಲಿ 2, ಉರ್ವದಲ್ಲಿ 1, ಕದ್ರಿ ಠಾಣೆಯಲ್ಲಿ 4 ಪ್ರಕರಣಗಳು ಈತನ ವಿರುದ್ಧ ದಾಖಲಾಗಿವೆ. ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.