ಯುವಕ ನಾಪತ್ತೆ

ಕರಾವಳಿ ಅಲೆ ವರದಿ

ಬಂಟ್ವಾಳ : ತಾಲೂಕಿನ ಬಿ ಮೂಡ ಗ್ರಾಮದ ತಾಳಿಪಡ್ಪು ನಿವಾಸಿ ರಿಯಾಝ್ (25) ಎಂಬವರು ಫೆಬ್ರವರಿ 4ರಿಂದ ಕಾಣೆಯಾಗಿದ್ದಾರೆ ಎಂದು ಅವರ ಸಹೋದರ ಕುಂಞÂಮೋನು ಬಂಟ್ವಾಳ ನಗರ ಠಾಣೆಗೆ ಬುಧವಾರ ದೂರು ನೀಡಿದ್ದಾರೆ.

ಫೆಬ್ರವರಿ 4ರಂದು ಮನೆಯಿಂದ ಕೆಲಸಕ್ಕೆಂದು ತೆರಳಿದ ರಿಯಾಝ್ ಇದುವರೆಗೂ ವಾಪಸ್ ಬಂದಿಲ್ಲ. ಅವಿವಾಹಿತರಾದ ಇವರಿಗೆ ಯಾವುದೇ ಕಟ್ಟ ಅಭ್ಯಾಸವೂ ಇರುವುದಿಲ್ಲ. ದೂರವಾಣಿ ಸಂಪರ್ಕಕ್ಕೂ ಸಿಗುತ್ತಿಲ್ಲ ಎಂದವರು ದೂರಿನಲ್ಲಿ ತಿಳಿಸಿದ್ದಾರೆ.

LEAVE A REPLY