ಹೆಂಡತಿಗೆ ಅವಳ ಕಸಿನ್ ಜೊತೆ ಸಂಬಂಧ

ಪ್ರ : ನನಗೆ 38 ವರ್ಷ. ಹೆಂಡತಿಗೆ 32. ಮದುವೆಯಾಗಿ ಎಂಟು ವರ್ಷಗಳಾದವು. ನಮಗೆ ಆರು ವರ್ಷದ ಮಗ ಮತ್ತು ಮೂರು ವರ್ಷದ ಮಗಳು ಇದ್ದಾರೆ. ನಾನು ಅವಳನ್ನು ಪ್ರೀತಿಸಿಯೇ ಮದುವೆಯಾಗಿದ್ದು. ನಮ್ಮ ಆಫೀಸಿನಲ್ಲೇ ಅವಳು ಕೆಲಸ ಮಾಡುತ್ತಿದ್ದಳು. ಆಕೆ ಗರ್ಭಿಣಿಯಾದ ನಂತರ ಡಾಕ್ಟರ್ ಸಲಹೆಯಂತೆ ಕೆಲಸ ಬಿಟ್ಟಳು. ಅವಳಿಗೆ ನೌಕರಿಗೆ ಹೋಗುವುದು ಇಷ್ಟವಾದರೂ ಮಕ್ಕಳು ಸ್ವಲ್ಪ ದೊಡ್ಡವರಾಗುವವರೆಗೆ ಮನೆಯಲ್ಲೇ ಇರುವಂತೆ ನಾನೂ ಹೇಳಿದೆ. ಆದರೆ ಅವಳು ಅದರ ದುರ್ಲಾಭ ಪಡೆಯುತ್ತಾಳೆ ಅಂದುಕೊಂಡಿರಲಿಲ್ಲ. ಇದೇ ಊರಿನಲ್ಲಿರುವ ಅವಳ ಮಾವನ ಮಗ ನಮ್ಮ ಮನೆಗೆ ಆಗಾಗ ಬರುತ್ತಿದ್ದ. ಅವನಿಗೆ ಮದುವೆಯಾದರೂ ಅವನ ಹೆಂಡತಿ ಊರಿನಲ್ಲಿ ಇದ್ದಾಳೆ. ಅವನೂ ಮತ್ತು ನನ್ನ ಹೆಂಡತಿ ಇಬ್ಬರೂ ಸಮವಯಸ್ಕರಾದ್ದರಿಂದ ಇಬ್ಬರ ನಡುವೆ ಒಳ್ಳೆಯ ಸ್ನೇಹವಿರುವುದು ನನಗೂ ಗೊತ್ತು. ಆದರೆ ಅವರಿಬ್ಬರ ನಡುವೆ ಬೇರೆ ರೀತಿಯ ರಿಲೇಶನ್‍ಶಿಪ್ ಇದೆ ಅಂತ ಕೆಲವು ದಿನಗಳ ಹಿಂದಷ್ಟೇ ನನ್ನ ಗಮನಕ್ಕೆ ಬಂತು. ನನ್ನ ಎದುರು ಇಬ್ಬರೂ ಸರಿಯಾಗಿಯೇ ನಡೆದುಕೊಳ್ಳುತ್ತಾರೆ. ಆದರೆ ಅವರಿಬ್ಬರೂ ಜೊತೆಯಲ್ಲಿ ಮಲಗುವುದೂ ಉಂಟು ಅಂತ ನನ್ನ ಮಗಳ ಮುಗ್ಧ ಮಾತಿನಿಂದ ಗೊತ್ತಾಯಿತು. ನಾನು ನನ್ನ ಹೆಂಡತಿಯನ್ನು ತುಂಬ ಪ್ರೀತಿಸುತ್ತೇನೆ. ಅವಳೂ ನನ್ನ ಬಗ್ಗೆ ಕಾಳಜಿ ತೋರಿಸುತ್ತಾಳೆ. ನನಗೆ ಈ ರೀತಿಯ ಮೋಸ ಮಾಡುತ್ತಾಳೆ ಎನ್ನುವ ಕಲ್ಪನೆಯೂ ನನಗಿರಲಿಲ್ಲ. ಅವಳನ್ನು ಬಿಟ್ಟು ಬದುಕುವುದೂ ಕಷ್ಟ. ಚಿಕ್ಕ ಮಕ್ಕಳ ಭವಿಷ್ಯವನ್ನು ನೆನೆದರೆ ಭಯವಾಗುತ್ತದೆ. ಅವಳ ಈ ರೀತಿಯ ಸಂಬಂಧದ ಬಗ್ಗೆ ನನ್ನ ಹೆತ್ತವರಿಗೆ ಗೊತ್ತಾದರೆ ಮೊದಲೇ ನನ್ನ ಮದುವೆಯ ಬಗ್ಗೆ ಅಸಮಾಧಾನ ಇರುವ ಅವರು ಅವಳನ್ನು ಮನೆಗೇ ಸೇರಿಸಿಕೊಳ್ಳಲಿಕ್ಕಿಲ್ಲ. ಅವಳ ಹತ್ತಿರ ಇನ್ನೂ ಈ ವಿಷಯ ಪ್ರಸ್ತಾಪಿಸಿಲ್ಲ. ಅವಳ ಜೊತೆ ಮೊದಲಿನಂತೆ ಸೆಕ್ಸ್ ಸುಖ ಹೊಂದಲೂ ಮನಸ್ಸಾಗುತ್ತಿಲ್ಲ. ಒಟ್ಟೂ ನನ್ನ ಜೀವನವೇ ಡೋಲಾಯಮಾನವಾಗಿದೆ. ಸಲಹೆ ಕೊಡಿ ಪ್ಲೀಸ್.

: ಗಂಡನೇ ಆಗಿರಲಿ, ಹೆಂಡತಿಯೇ ಆಗಿರಲಿ ಈ ರೀತಿಯ ಮೋಸವನ್ನು ಸಹಿಸುವುದು ತುಂಬಾ ಕಷ್ಟವೇ. ಸಂಗಾತಿಯ ಬೇರೆ ಯಾವ ತಪ್ಪನ್ನಾದರೂ ಕ್ಷಮಿಸಬಹುದು. ಆದರೆ ಬೇರೆಯವರ ಜೊತೆಗೆ ಸಂಬಂಧವಿದ್ದರೆ ಅದನ್ನು ಒಪ್ಪಿಕೊಂಡು ನಾರ್ಮಲ್ ಬದುಕು ಸಾಗಿಸುವುದು ಅಷ್ಟು ಸುಲಭದ ಮಾತಲ್ಲ. ಮೊದಲಿನ ಕಾಲದಲ್ಲಿ ಕೆಲವು ಗಂಡಸರಿಗೆ ಅಕ್ರಮ ಸಂಬಂಧವಿದ್ದು ಹೆಂಡತಿ ಮನದಲ್ಲೇ ನೋವನ್ನನುಭವಿಸುವ ಕೇಸುಗಳು ಇದ್ದರೂ ಹೆಂಗಸರು ಈ ರೀತಿ ದಾರಿ ತಪ್ಪುವುದು ತುಂಬಾ ವಿರಳವಿತ್ತು. ಈಗೀಗ ದೊಡ್ಡ ಶಹರದಲ್ಲಿ ಹುಡುಗಿಯರೂ ಕ್ರೇಜಿಗಳಾಗುತ್ತಿದ್ದಾರೆ. ಅದೂ ಅಲ್ಲದೇ ಯಾರೂ ತಪ್ಪು ಭಾವಿಸುವುದಿಲ್ಲವಾದ ಕಾರಣ ಕಸಿನ್ಸ್‍ಗಳ ನಡುವೆ ಅಕ್ರಮ ಸೆಕ್ಸ್ ಜಾಸ್ತಿಯಾಗಿದೆಯಂತ ಸಮೀಕ್ಷೆ ಹೇಳುತ್ತದೆ. ನಿಮ್ಮ ಹೆಂಡತಿ ಈ ರೀತಿ ನಿಮ್ಮ ಬೆನ್ನ ಹಿಂದೆ ಮಾಡಿದ್ದು ಅಕ್ಷಮ್ಯವೇ. ನಿಮಗೆ ಈ ವಿಷಯ ಗೊತ್ತೇ ಆಗುವುದಿಲ್ಲ ಅಂತ ಅವಳು ಭಾವಿಸರಬೇಕು. ಅಲ್ಲವಾದರೆ, ನಿಮಗೆ ಗೊತ್ತಾಗಿ ನೀವು ಅವಳನ್ನು ತ್ಯಜಿಸಿದರೆ ತನ್ನ ಆ ಕಸಿನ್‍ಗೂ ಮದುವೆಯಾಗಿದ್ದರಿಂದ ತನಗೆ ಮುಂದೆ ದಿಕ್ಕು ಯಾರು ಅನ್ನುವ ಕಲ್ಪನೆಯೂ ಅವಳಿಗಿಲ್ಲ ಅಂದರೆ ಅವಳು ಶುದ್ಧ  ಹುಂಬಳು. ದಾಂಪತ್ಯದಲ್ಲಿ ಪಾರದರ್ಶಕತೆ ಮತ್ತು ಪ್ರಾಮಾಣಿಕತೆ ಇಲ್ಲದಿದ್ದರೆ ಅಂತಹ ಜೋಡಿಗಳ ನಡುವೆ ಸಾಮರಸ್ಯ ಇರುವುದು ಕಷ್ಟವೇ. ಆದರೂ ನೀವು ಅವಳನ್ನು ಅಷ್ಟೊಂದು ಹಚ್ಚಿಕೊಂಡಿರುವುದರಿಂದ ಮತ್ತು ಮಕ್ಕಳ ಭವಿಷ್ಯದ ದೃಷ್ಟಿಯಿಂದ ಈ ಬಾರಿ ಕ್ಷಮಿಸಿ ಅವಳಿಗೆ ಬುದ್ಧಿ ಹೇಳುವುದು ಒಳ್ಳೆಯದು. ಇನ್ನು ಮುಂದೆ ಆ ಕಸಿನ್ ಜೊತೆಗಿನ ಎಲ್ಲ ಸಂಪರ್ಕ ಕಡಿದುಕೊಳ್ಳಲು ವಾರ್ನ್ ಮಾಡುವುದು ಉತ್ತಮ. ಯಾವುದೋ ದೌರ್ಬಲ್ಯಕ್ಕೆ ಒಳಗಾಗಿ ಮಾಡಿದ ತಪ್ಪನ್ನು ಪುನಃ ಮಾಡದೇ ಅವಳು ಸದ್ಗøಹಿಣಿಯಾಗಿ ಬಾಳುತ್ತೇನೆ ಅಂತ ಪ್ರಾಮಿಸ್ ಮಾಡಿದರೆ ನೀವೂ ಒಂದು ಛಾನ್ಸ್ ಕೊಡಬಹುದು. ನಿಮ್ಮ ಆ ದೊಡ್ಡತನಕ್ಕೆ ಅವಳು ಆಭಾರಿಯಾಗಿದ್ದು ನಿಮ್ಮನ್ನು ಮೊದಲಿಗಿಂತಲೂ ಹೆಚ್ಚು ಪ್ರೀತಿಸಿದರೆ ಕಾಲಕ್ರಮೇಣ ನಿಮ್ಮ ಮನಸ್ಸಿಗಾದ ಗಾಯ ಮರೆಯಾಗಬಹುದು.