ಆನೆ ಕಾಲ್ತುಳಿತಕ್ಕೆ ವ್ಯಕ್ತಿ ಬಲಿ

ಬೆಂಗಳೂರು : ಆನೆಯೊಂದು ಅಟ್ಟಾಡಿಸಿಕೊಂಡು ಬಂದು ವ್ಯಕ್ತಿಯೊಬ್ಬರನ್ನು ಸೊಂಡಿಲಿನಿಂದ ನೆಲಕ್ಕೆ ಅಪ್ಪಳಿಸಿ ಕೊಂದು ಹಾಕಿದ ಘಟನೆ ಹೊಂಕರವಳ್ಳಿಯ ಡೊಂಕನಗದ್ದೆ ಗ್ರಾಮದಲ್ಲಿ ನಿನ್ನೆ ನಡೆದಿದೆ. ಮೃತ ವ್ಯಕ್ತಿ ಯೋಗೇಶ್ (45). ಇವರು ಮಹೇಶ್ ಎಂಬವರ ಕಾಫಿ ಎಸ್ಟೇಟಿನಲ್ಲಿ ರೈಟರಾಗಿ ಕೆಲಸ ಮಾಡುತ್ತಿದ್ದು, ಸಂಜೆ ಹೊತ್ತು ಎಸ್ಟೇಲಿಗೆ ಹೋಗುತ್ತಿದ್ದಾಗ ಮದವೇರಿದ ಆನೆಯೊಂದು ಇವರನ್ನು ಅಟ್ಟಿಸಿಕೊಂಡು ಬಂದಿದೆ. ಯೋಗೇಶ್ ಅತಿ ವೇಗದಿಂದ ಓಡಿದರೂ ಆನೆ ದಾಳಿಯಿಂದ ತಪ್ಪಿಸಲು ಸಾಧ್ಯವಾಗಿಲ್ಲ. ಸ್ಥಳದಲ್ಲೇ ಮೃತಪಟ್ಟ ಯೋಗೇಶ್ ಬಗ್ಗೆ ಗ್ರಾಮಸ್ಥರು ಕುಟುಂಬಿಕರಿಗೆ ಮಾಹಿತಿ ನೀಡಿದ್ದಾರೆ. ಈ ಘಟನೆ ಬಳಿಕ ಸೋಮವಾರಪೇಟೆ-ಬೇಲೂರು ರಸ್ತೆಯಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.