ವೈದ್ಯರ ನಿರ್ಲಕ್ಷ ್ಯ ಪ್ರತಿಭಟಿಸಲು ತಾಯಿ ಶವ ಹೊತ್ತೊಯ್ದ ಪುತ್ರ !

ಹೊಸಪೇಟೆ : ಇಲ್ಲಿನ ಸರ್ಕಾರಿ ಆಸ್ಪತ್ರೆಯೊಂದಕ್ಕೆ ದಾಖಲಾದ ಬಳಿಕ ಕೆಲವು ಗಂಟೆಯಾದರೂ ಸೂಕ್ತ ಚಿಕಿತ್ಸೆ ಸಿಗದೆ ವೃದ್ಧ ಮಹಿಳೆ ಹಾಗೂ ಆಕೆಯ ಪತಿ ಮೃತಪಟ್ಟಿದ್ದು, ಇದಕ್ಕೆ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಯ ನಿರ್ಲಕ್ಷ್ಯವೇ ಕಾರಣವೆಂದು ಪ್ರತಿಭಟಿಸಿದ ದಂಪತಿಯ ಪುತ್ರ ಆಸ್ಪತ್ರೆಯಿಂದ ತಾಯಿಯ ಮೃತದೇಹವನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗುತ್ತಿರುವ ದೃಶ್ಯ ಎಲ್ಲೆಡೆ ವೈರಲಾಗಿದೆ.