ಅಯ್ಯೋಧ್ಯೆಯ ಮಸೀದಿ ಸ್ಥಳಾಂತರ ಸಾಧ್ಯ ಎಂದಿದ್ದ ನದ್ವಿ ಮಂಡಳಿಯಿಂದ ಹೊರಕ್ಕೆ

ಹೈದರಾಬಾದ್ : ಶರೀಯ ಪ್ರಕಾರ ಅಯ್ಯೋಧ್ಯೆಯಲ್ಲಿನ ವಿವಾದಿತ ಸ್ಥಳದಿಂದ ಮಸೀದಿಯನ್ನು ಸ್ಥಳಾಂತರಿಸುವುದು ಸಾಧ್ಯವಿದೆ ಎಂದು ಹೇಳಿಕೆ ನೀಡಿದ್ದ ತನ್ನ ಕಾರ್ಯಕಾರಿ  ಮಂಡಳಿ ಸದಸ್ಯ ಮೌಲಾನ ಸಯ್ಯದ್ ಸಲ್ಮಾನ್ ಹುಸೈನ್ ನದ್ವಿ ಅವರು ಮಂಡಳಿಯಿಂದ ಹೊರನಡೆಯಲು ಕೈಗೊಂಡ ನಿರ್ಧಾರವನ್ನು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಅಂಗೀಕರಿಸಿದೆ. ಈ ಬಗ್ಗೆ ಅದು ಟ್ವೀಟ್ ಮಾಡಿದೆ.

ಅಯ್ಯೋಧ್ಯೆ ವಿವಾದಕ್ಕೆ ನ್ಯಾಯಾಲಯದ ಹೊರಗೆ  ಪರಿಹಾರ ಕಂಡು ಹಿಡಿಯಲು ಶ್ರಮಿಸುತ್ತಿರುವ ಆರ್ಟ್ ಆಫ್ ಲಿವಿಂಗಿನ ರವಿಶಂಕರ್ ಅವರನ್ನು ಭೇಟಿಯಾದ ಬೆನ್ನಲ್ಲೇ ನದ್ವಿ ಅವರ ಹೇಳಿಕೆ ಬಂದಿತ್ತು. “ಮುಸ್ಲಿಮರು ಮಸೀದಿಯನ್ನು ಸಂರಕ್ಷಿಸಬೇಕಾದರೂ, ಅದೇ ಸ್ಥಳದಲ್ಲಿ ಹೋರಾಡಿ ಅದನ್ನು ಪಡೆಯಬೇಕೆಂದೇನೂ ಇಲ್ಲ” ಎಂದು ಅವರು ಹೇಳಿದ್ದರು.

ಆದರೆ ಮಂಡಳಿಯ ಅಭಿಪ್ರಾಯವನ್ನು ಒಪ್ಪದೇ ಇದ್ದ ನದ್ವಿ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಇನ್ನೊಬ್ಬ ಸದಸ್ಯ ಖಾಸಿಂ ರಸೂಲ್ ಇಲ್ಯಾಸ್ ಹೇಳಿಕೊಂಡಿದ್ದಾರೆ. “ಮಸೀದಿ ಅಲ್ಲಾಹನ  ಮನೆಯಾಗಿದೆ ಹಾಗೂ ಹಾಗೆಯೇ ಉಳಿಯುತ್ತದೆ. ಅದನ್ನು ಸ್ಥಳಾಂತರಿಸಲು, ಉಡುಗೊರೆಯಾಗಿ ನೀಡಲು ಯಾ ಮಾರಾಟ ಮಾಡಲು ಸಾಧ್ಯವಿಲ್ಲ. ಇದು ಶರೀಯ. ಸಲ್ಮಾನ್ ನದ್ವಿ ಅವರ ನಿಲುವು ಇದಕ್ಕೆ ತದ್ವಿರುದ್ಧವಾಗಿದೆ” ಎಂದು ಇಲ್ಯಾಸ್ ಹೇಳಿದ್ದಾರೆ.

 

LEAVE A REPLY