ಬರಲಿದೆ ಮಲೈಕಾಳ ಯೋಗಾ ಸೆಂಟರ್

ವಯಸ್ಸು 45 ಆದರೂ 20ರ ಬೆಡಗಿಯರನ್ನು ನಾಚಿಸುವ ಹಾಟ್ ಮೈಮಾಟ ಹೊಂದಿರುವ ಮಲೈಕಾ ಆರೋರಾ ಈಗ ಯೋಗಾ ಸೆಂಟರ್ ತೆರೆಯಲಿದ್ದಾಳೆ.  15 ವರ್ಷದ ಮಗನನ್ನು ಕೂಡಾ ಹೊಂದಿರುವ ಮಲೈಕಾಳ ಫಿಟ್ನೆಸ್ ಬಗ್ಗೆ ಬಿ ಟೌನಿನಲ್ಲಿ ಭಾರೀ ಕ್ರೇಜ್ ಇದೆ. ಆಕೆ ಯೋಗ ಹಾಗೂ ಜಿಮ್ಮಿನಲ್ಲಿ ಭಾರೀ ಕಸರತ್ತು ಮಾಡುವ ಫೊಟೋ ಹಾಗೂ ವೀಡಿಯೋ ಆಗೀಗ ಸೋಷಿಯಲ್ ಮೀಡಿಯಾದಲ್ಲಿ ರೌಂಡ್ ಹೊಡೆಯುತ್ತಿರುತ್ತದೆ. ಈಗ ಆಕೆ ಮುಂಬೈನಲ್ಲಿ `ದಿವಾ ಸ್ಟುಡಿಯೋ’ ಎನ್ನುವ ಯೋಗಾ ಸೆಂಟರನ್ನು ತೆರೆಯುತ್ತಿದ್ದಾಳೆ.

ಈ ಕುರಿತು ಮಾತಾಡುತ್ತಾ ಮಲೈಕಾ “ನಾನು ಕಳೆದ ಐದು ವರ್ಷಗಳಿಂದ ಪ್ರತೀ ದಿನ ಯೋಗ ಮಾಡುತ್ತಿದ್ದು ಅದೀಗ ನನ್ನ ಜೀವನದ ಭಾಗವೇ ಆಗಿಬಿಟ್ಟಿದೆ. ನಾನೀಗ ಮಹಿಳೆಯರಿಗಾಗಿಯೇ ಸ್ಪೆಷಲ್ ಯೋಗ ಸೆಂಟರನ್ನು ತೆರೆಯುತ್ತಿದ್ದು ಚಿಕ್ಕ ವಯಸ್ಸಿನಿಂದ ಹಿಡಿದು ವಯಸ್ಸಾದ ಮಹಿಳೆಯವರೆಗೂ ಇದರ ಉಪಯೋಗ ಪಡೆಯಬಹುದಾಗಿದೆ. ಮಹಿಳೆಯರು ಯೋಗ ಮಾಡುವ ಮೂಲಕ ಆರೋಗ್ಯವಂತರಾಗಿ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲಿ ಎನ್ನುವುದು ನನ್ನ ಆಸೆ” ಎಂದಿದ್ದಾಳೆ.

ವಿಶೇಷವೆಂದರೆ ಈ ಯೋಗಾ ಸೆಂಟರಿನಲ್ಲಿ ಯೋಗದ ಜೊತೆಗೆ ಡ್ಯಾನ್ಸನ್ನೂ ಮಿಕ್ಸ್ ಮಾಡುವುದಲ್ಲದೇ ಗಾಳಿಯಲ್ಲಿ, ನೀರಿನಲ್ಲಿ ಕೂಡಾ ಕಸರತ್ತು ಮಾಡುವ ಕಲೆ ಹೇಳಿಕೊಡಲಾಗುತ್ತದೆಯಂತೆ. ಮುಂಬೈನಲ್ಲಿ ಮಾತ್ರವಲ್ಲದೇ ಬೇರೆಬೇರೆ ಕಡೆಯೂ ಯೋಗ ಸೆಂಟರಿನ ಬ್ರಾಂಚುಗಳನ್ನು ತೆರೆಯುವ ಉದ್ದೇಶ ಹೊಂದಿದ್ದಾಳೆ ಮಲೈಕಾ.

LEAVE A REPLY