ಬಹುನಿರೀಕ್ಷೆಯ ಮಫ್ತಿ ಇಂದು ತೆರೆಗೆ

ಇಂದು ಶಿವರಾಜ್ ಕುಮಾರ್ ಮತ್ತು ಶ್ರೀಮುರಳಿ ಜಗುಲ್ಬಂದಿಯ `ಮಫ್ತಿ’ ಚಿತ್ರ ರಾಜ್ಯಾದ್ಯಂತ 400ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ. ಹೆಚ್ಚಾಗಿ ಬೇರೆ ಭಾಷೆಗಳ ಚಿತ್ರವೇ ಬಿಡುಗಡೆಯಾಗುತ್ತಿದ್ದ ಬೆಂಗಳೂರಿನ ಪ್ರತಿಷ್ಠಿತ ಚಿತ್ರಮಂದಿರ `ಊರ್ವಶಿ’ಯಲ್ಲೂ `ಮಫ್ತಿ’ ಸಿನಿಮಾ ತೆರೆಕಾಣುತ್ತಿದೆ.

`ಉಗ್ರಂ’, `ರಥಾವರ’ ಚಿತ್ರದ ನಂತರ ಶ್ರೀಮುರಳಿಯ ಚಿತ್ರದ ಬಗ್ಗೆ ಸಿನಿಪ್ರೇಕ್ಷಕರಿಗೂ ಕ್ರೇಜ್ ಹೆಚ್ಚಿದೆ. ಈ ಸಿನಿಮಾದಲ್ಲಿ ಶಿವರಾಜಕುಮಾರ್ ಕೂಡಾ ಶ್ರಿಮುರಳಿ ಜೊತೆ ನಟಿಸುವುದರಿಂದ ಚಿತ್ರದ ಬಗ್ಗೆ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ. ಸಿನಿಮದಲ್ಲಿ ಸಾನ್ವಿ ಶ್ರೀವಾಸ್ತವ ಹೀರೋಯಿನ್.

ಈ ಸಿನಿಮದ ಬಗ್ಗೆ ಮಾತಾಡುತ್ತಾ ಮುರಳಿ “ಇದು ನನ್ನ ವೃತ್ತಿಯಲ್ಲೇ ಇದು ಅತೀ ದೊಡ್ಡ ಚಿತ್ರವಾಗಿದೆ. ಹಾಗಾಗಿ ಚಿತ್ರದ ಬಗ್ಗೆ ನರ್ವಸ್ ಆಗಿದ್ದೇನೆ. ಜೊತೆಗೇ ಪ್ರೇಕ್ಷಕರ ಪ್ರತಿಕ್ರಿಯೆಗಾಗಿ ಎಕ್ಸೈಟಿನಿಂದ ಕಾಯುತ್ತಿದ್ದೇನೆ” ಎಂದಿದ್ದಾನೆ.  ಅದಲ್ಲದೇ “ತೆರೆಯ ಮೇಲಿನ ಪಾತ್ರಗಳು ನನ್ನನ್ನು ಹೆಚ್ಚು ಆಶ್ಚರ್ಯ ಚಕಿತನನ್ನಾಗಿ ಮಾಡುತ್ತವೆ. ಇದು ನಿಜನ ಎಂದು ನನ್ನನ್ನೇ ನಾನು ಹಲವು ಬಾರಿ ಪ್ರಶ್ನಿಸಿಕೊಂಡಿದ್ದೇನೆ” ಎನ್ನುತ್ತಾನೆ. ಇದರಲ್ಲಿ ಮುರಳಿ ವಿಭಿನ್ನ ಪಾತ್ರದಲ್ಲಿ ನಟಿಸಿದ್ದು ಆತ ಬೇಹುಗಾರಿಕೆ ವ್ಯಕ್ತಿ (ಮಫ್ತಿ) ಯಾಗಿ ಅಭಿನಯಿಸಿದ್ದಾನೆ. ಈ ಸಿನಿಮಾಗೆ ನರ್ತನ್ ಎನ್ನುವವರು ಮೊದಲ ಬಾರಿಗೆ ಆಕ್ಷನ್ ಕಟ್ ಹೇಳಿದ್ದಾರೆ.