ಈ ಮರದಲ್ಲಾಗುವ ಹಣ್ಣುಗಳೆಲ್ಲಾ ಹುಡುಗಿಯ ಆಕೃತಿಯಲ್ಲಿರುತ್ತವೆ !

ಈವರೆಗೆ ನಾವೆಲ್ಲಾ ಗುಂಡಗಿರುವ ಇಲ್ಲವೇ ಉದ್ದವಾಗಿರುವ ತರಕಾರಿ ಹಾಗೂ ಹಣ್ಣುಗಳನ್ನು ಮರಗಳಲ್ಲಿ ನೋಡಿದ್ದೇವೆ. ಆದರೆ ಇಂತಹುದೇ ಮರದಲ್ಲಿ ಹಣ್ಣುಗಳೆಲ್ಲಾ ಮಹಿಳೆಯ ಆಕೃತಿಯಲ್ಲಿದ್ದರೆ ? ಇದು ಅಸಾಧ್ಯ, ಮರದಲ್ಲಿರುವ ಎಲ್ಲಾ ಹಣ್ಣುಗಳು ಮಹಿಳೆಯ ಆಕಾರದಲ್ಲಿರುವುದೇ ಅಂತ ಅಂದುಕೊಳ್ಳಬೇಡಿ. ಯಾಕೆಂದರೆ ಥಾಯ್ಲೆಂಡಿನ ಮರವೊಂದರಲ್ಲಿ ಇಂತಹ ಹಣ್ಣುಗಳಾಗುತ್ತಿದ್ದು ನೋಡುಗರಲ್ಲಿ ಅಚ್ಚರಿ ಮೂಡಿಸಿದೆ.

ಸಾಮಾಜಿಕ ಜಾಲಾತಾಣಗಳಲ್ಲಿ ಈ ಮರ ಹಾಗೂ ಇದರಲ್ಲಾಗುವ ಹಣ್ಣಿನ ಚಿತ್ರ ಹಾಗೂ ವಿಡಿಯೋಗಳು ವೈರಲ್ ಆಗುತ್ತಲೇ ಇವೆ. ಈ ವಿಚಾರ ನೋಡುಗರಲ್ಲೂ ಅಚ್ಚರಿ ಹಾಗೂ ಭಾರೀ ಕುತೂಹಲವೂ ಮೂಡಿಸಿತ್ತು. ಇಷ್ಟಾದರೂ ಈ ಹಣ್ಣುಗಳಿಗೆ ಮಹಿಳೆಯ ಆಕೃತಿ ಬರಲು ಕಾರಣವೇನು ಎಂಬ ವಿಚಾರ ಮಾತ್ರ ರಹಸ್ಯವಾಗಿದ್ದು, ಇಂದಿಗೂ ಕಾರಣವನ್ನು ಹುಡುಕುವ ಪ್ರಯತ್ನ ಮುಂದುವರೆದಿದೆ.

ಥಾಯ್ಲೆಂಡ್ ನಿವಾಸಿಗಳು ಈ ಮರವನ್ನು `ನೈರೀಫನ್’ ಎಂದು ಕರೆಯುತ್ತಿದ್ದು, ಇದಕ್ಕೆ ಭೌದ್ಧ ನಂಬಿಕೆಗಳೂ ಇವೆ. ಬೌದ್ಧ ನಂಬಿಕೆಗಳನ್ವಯ ಈ ಮರವನ್ನು ಖುದ್ದು ಭಗವಂತನೇ ಥಾಯ್ಲೆಂಡಿನ ಹಿಮಾಫನ್ ಅರಣ್ಯದಲ್ಲಿ ಬೆಳೆಸಿದ್ದಾರೆ. ಹೀಗಾಗಿಯೇ ಈ ಮರದಲ್ಲಿ ಮಹಿಳೆಯ ಆಕಾರದ ಹಣ್ಣುಗಳಾಗುತ್ತವೆಯಂತೆ.

ಇನ್ನು ಇಲ್ಲಿನ ನಿವಾಸಿಗಳು ನೂರಾರು ವರ್ಷಗಳ ಹಿಂದೆ ಇಂದ್ರ ದೇವ ತನ್ನ ಪತ್ನಿ ಹಾಗೂ ಮಕ್ಕಳೊಂದಿಗೆ ಇದೇ ಮರದಲ್ಲಿ ವಾಸವಿದ್ದರು. ಒಂದು ಬಾರಿ ಭಗವಂತನ ಪತ್ನಿ ಅರಣ್ಯದಲ್ಲಿ ಹಣ್ಣು ಸಂಗ್ರಹಿಸಲು ತೆರಳಿದ್ದಾಗ ಕೆಲ ರಾಕ್ಷಸರು ಅವರ ಮೇಲೆ ದಾಳಿ ನಡೆಸಿದ್ದರು. ತನ್ನ ಪತ್ನಿಯನ್ನು ರಕ್ಷಿಸಲು ಇಂದ್ರದೇವ ಆ ಕೂಡಲೇ ಅರಣ್ಯದಲ್ಲಿ ಇಂತಹ 12 ಮರಗಳನ್ನು ಸೃಷ್ಠಿಸಿದ್ದಲ್ಲದೆ ರಾಕ್ಷಸರನ್ನು ಮೋಸ ಮಾಡಲು ಮಹಿಳೆಯ ಆಕಾರದ ಹಣ್ಣುಗಳನ್ನು ಮರದಲ್ಲಿ ಸೃಷ್ಠಿಸಿದ್ದರು ಎಂದು ನಂಬುತ್ತಾರೆ.

ಇಲ್ಲಿನ ನಿವಾಸಿಗಳು ಇದೇ ವಿಚಾರವನ್ನು ನಂಬಿಕೊಂಡು ಬಂದಿದ್ದಾರೆಯಾದರೂ ಹಲವಾರು ಮಂದಿ ಇದನ್ನು ನಂಬಲು ಹಿಂದೇಟು ಹಾಕುತ್ತಾರೆ ಹಾಗೂ ವೈಜ್ಞಾನಿಕ ಕಾರಣಗಳನ್ನು ಹುಡುಕುತ್ತಿದ್ದಾರೆ. (ಸುದ್ದಿ ಕೃಪೆ : ಸುವರ್ಣ ನ್ಯೂಸ್)