ಲಂಚ ಪಡೆದ ಆರೋಪಿ ಇಂಜಿನಿಯರ್ ಆತ್ಮಹತ್ಯೆ

ಸಾಂದರ್ಭಿಕ ಚಿತ್ರ

ಚಿಂತಾಮಣಿ (ಚಿಕ್ಕಬಳ್ಳಾಪುರ ಜಿಲ್ಲೆ) : ಲಂಚ ಪಡೆದ ಆರೋಪ ಪ್ರಕರಣದಲ್ಲಿ ಕೋರ್ಟಿನಿಂದ ಜಾಮೀನು ಪಡೆದ 27 ವರ್ಷದ ಕಿರಿಯ ಇಂಜಿನಿಯರೊಬ್ಬ ಮೈಗೆ ಬೆಂಕಿಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.  ತಾಲೂಕು ಕಚೇರಿಯಲ್ಲಿ `ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ’ಯಡಿ ಕಿರಿಯ ಇಂಜಿನಿಯರಾಗಿ ಗುತ್ತಿಗೆ ಕೆಲಸ ಮಾಡುತ್ತಿದ್ದ ಶ್ರೀನಾಥ್ ರೆಡ್ಡಿ ಆತ್ಮಹತ್ಯೆ ಮಾಡಿಕೊಂಡವರಾಗಿದ್ದಾರೆ. ಜನವರಿ 27ರಂದು ಲೋಕಾಯುಕ್ತ ನಡೆಸಿದ ದಾಳಿ ವೇಳೆ ರೆಡ್ಡಿ ಬಂಧಿಸಲ್ಪಟ್ಟಿದ್ದರು. ಇವರು ಇತ್ತೀಚೆಗಷ್ಟೇ ಜಾಮೀನಿನಲ್ಲಿ ಬಿಡುಗಡೆಯಾಗಿದ್ದು, ಬಳಿಕ ಬೆಂಗಳೂರಿನ ಸಹೋದರಿ ಮನೆಯಲ್ಲಿ ವಾಸಿಸುತ್ತಿದ್ದರು.