ವಿದ್ಯಾರ್ಥಿನಿಯ ಸಾವು ಶಿಕ್ಷಕರ ಏಟಿನಿಂದಲ್ಲ : ಮೆಡಿಕಲ್ ವರದಿ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಖಾಸಗಿ ಶಾಲಾ 6ನೇ ತರಗತಿಯ ವಿದ್ಯಾರ್ಥಿನಿ ಮೃತಪಟ್ಟಿರುವುದಕ್ಕೆ ಅನಾರೋಗ್ಯವೇ ಕಾರಣ ಹೊರತು ಶಿಕ್ಷಕರ ಥಳಿತದಿಂದ ಅಲ್ಲ ಎಂದು ಮರಣೋತ್ತರ ಪರೀಕ್ಷಾ ವರದಿ ದೃಢಪಡಿಸಿದೆ.

ಉಪ್ಪಳದ ಖಾಸಗಿ ಶಾಲಾ 6ನೇ ತರಗತಿ ವಿದ್ಯಾರ್ಥಿನಿ ಮಣಿಮುಂಡ ಅಬ್ದುಲ್ ಖಾದರ್-ಮೆಹರುನ್ನೀಸಾ ದಂಪತಿ ಪುತ್ರಿ ಆಯಿಷಾಮೆಹಾಸ್ (11) ಮಂಗಳವಾರ ಬೆಳಿಗ್ಗೆ ಮೃತಪಟ್ಟಿದ್ದಳು. ವಾರದ ಹಿಂದೆ ಶಾಲೆಯ ತರಗತಿಯಲ್ಲಿ ಪರೀಕ್ಷಾ ಪತ್ರಿಕೆಯಲ್ಲಿ ಪ್ರಶ್ನೆಗಳನ್ನೇ ಬರೆದಿರುವುದಕ್ಕೆ ಇಬ್ಬರು ಶಿಕ್ಷಕಿಯರು ಥಳಿಸಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿ ಮೃತಪಟ್ಟಳೆಂದು ಆರೋಪ ಕೇಳಿಬಂದಿದ್ದು, ಘಟನೆಯ ಬಳಿಕ ವಿಷಯ ತಿಳಿದು ಜಿಲ್ಲಾಧಿಕಾರಿ ಮೃತದೇಹದ ಮರಣೋತ್ತರ ಪರೀಕ್ಷೆಗೆ ಆದೇಶಿಸಿದ್ದರು. ಪೆರಿಯಾರಂ ವೈದ್ಯಕೀಯ ಕಾಲೇಜಿನಲ್ಲಿ ನಡೆಸಿದ ಮರಣೋತ್ತರ ಪರೀಕ್ಷೆಯಲ್ಲಿ ವಿದ್ಯಾರ್ಥಿನಿ ಸಾವಿಗೆ ಅನಾರೋಗ್ಯವೇ ಕಾರಣ ಹೊರತು ಥಳಿತದ ಯಾವುದೇ ಕುರುಹುಗಳಿಲ್ಲವೆಂದು ವರದಿ ನೀಡಲಾಗಿದೆ. ವರದಿಯನ್ನು ಜಿಲ್ಲಾ ಪೆÇಲೀಸ್ ವರಿಷ್ಠರಿಗೆ ರವಾನಿಸಲಾಗಿದೆ.