ಪೆರ್ಲ ಅಶ್ವತ್ಥಕಟ್ಟೆಗೆ ಕರಿ ಆಯಿಲ್ ಹಚ್ಚಿದ ಪ್ರಕರಣ : ಒಬ್ಬ ಬಂಧನ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಪೆರ್ಲ ಪೇಟೆಯ ಅಶ್ವತ್ಥಕಟ್ಟೆಗೆ ಕರಿ ಆಯಿಲ್ ಹಚ್ಚಿ ವಿರೂಪಗೊಳಿಸಿದ ಪ್ರಕರಣದಲ್ಲಿ ಒಬ್ಬ  ಆರೋಪಿಯನ್ನು ಬದಿಯಡ್ಕ ಪೆÇಲೀಸರು ಬಂಧಿಸಿದ್ದಾರೆ. ಪೆರ್ಲ ಚೆಕ್ ಪೆÇೀಸ್ಟ್ ಬಳಿಯ ನಿವಾಸಿ ಮೊಹಮ್ಮದ್ ನೌಫಲ್ (20) ಬಂಧಿತ ಆರೋಪಿ. ಅಶ್ವತ್ಥಕಟ್ಟೆಗೆ ಕರಿ ಆಯಿಲ್ ಹಚ್ಚಿದ ಘಟನೆ ವಾರದ ಹಿಂದೆ ನಡೆದಿತ್ತು. ಈ ಸಂಬಂಧ 15 ಮಂದಿ ವಿರುದ್ಧ ಬದಿಯಡ್ಕ ಪೆÇಲೀಸರು ಜಾಮೀನುರಹಿತ ಕೇಸು ದಾಖಲಿಸಿಕೊಂಡಿದ್ದರು.