ಬಿಜೆಪಿ ಆಡಳಿತದ ಅಸ್ಸಾಂ, ಮಣಿಪುರದಲ್ಲಿ ರೋಹಿಂಗ್ಯಾಗಳ ವಿರುದ್ಧ ಕ್ರಮಕ್ಕೆ ಆದೇಶ

ನವದೆಹಲಿ : ಕೇಂದ್ರ ಸರ್ಕಾರ ಇದುವರೆಗೂ ರೋಹಿಂಗ್ಯಾ ಮುಸ್ಲಿಂ ನಿರಾಶ್ರಿತರ ವಿಷಯದಲ್ಲಿ ಏನೂ ಹೇಳದಿದ್ದರೂ, ಬಿಜೆಪಿ ಸರ್ಕಾರವಿರುವ ಅಸ್ಸಾಂ ಮತ್ತು ಮಣಿಪುರ ರಾಜ್ಯಗಳಲ್ಲಿ ಗಡಿ ದಾಟಲು ಪ್ರಯತ್ನಿಸುತ್ತಿರುವ ರೋಹಿಂಗ್ಯಾ ಮುಸ್ಲಿಮರನ್ನು “ಹಿಂದಕ್ಕೆ ಕಳುಹಿಸುವಂತೆ” ಪೊಲೀಸ್ ಇಲಾಖೆಗೆ ಸರ್ಕಾರಗಳು ನಿರ್ದೇಶಿಸಿವೆ.

ಅಸ್ಸಾಂ ರಾಜ್ಯವು ಬಾಂಗ್ಲಾದೇಶದೊಂದಿಗೆ 262 ಕಿಮೀ ಗಡಿ ಹಂಚಿಕೊಂಡಿದ್ದರೆ, ಮಣಿಪುರ, ಮಿಝೋರಾಂ ಮತ್ತು ನಾಗಾಲ್ಯಾಂಡ್ ರಾಜ್ಯಗಳೂ ರೋಹಿಂಗ್ಯಾ ಮುಸ್ಲಿಮರ ವಿರುದ್ಧ ಕ್ರಮಕ್ಕೆ ಮುಂದಾಗಿದೆ.