ಬೀಫ್ ಖಾದ್ಯ ನೀಡದ್ದಕ್ಕೆ ತಂಡದಿಂದ ಹೋಟೆಲಿಗೆ ಹಾನಿ, ಕಾರ್ಮಿಕರಿಗೆ ಹಲ್ಲೆ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಬೀಫ್ ಖಾದ್ಯ ನೀಡದಕ್ಕೆ ತಂಡವೊಂದು ಹೋಟೆಲಿಗೆ ಹಾನಿಗೊಳಿಸಿದ್ದು, ಮಾಲಕ ಹಾಗೂ ಕಾರ್ಮಿಕರಿಗೆ ಹಲ್ಲೆ ಮಾಡಿದ ಘಟನೆ ಪೆÇಯಿನಾಚಿಯಲ್ಲಿ ನಡೆದಿದೆ.

ಪೆÇಯಿನಾಚಿ ಪೆಟ್ರೋಲ್ ಬಂಕ್ ಬಳಿಯ ಐಲ್ಯಾಂಡ್ ಹೋಟೆಲಿಗೆ ಹಾನಿಗೊಳಿಸಲಾಗಿದೆ. ಟ್ಯಾಕ್ಸಿಯಲ್ಲಿ ಬಂದ ತಂಡವೊಂದು ಬೀಫ್ ಖಾದ್ಯ ನೀಡುವಂತೆ ಕೇಳಿತ್ತು. ಆಗ ಹೋಟೆಲಿನಲ್ಲಿ ಬೀಫ್ ಆಹಾರ ತಯಾರಿಸುವುದಿಲ್ಲ ಎಂದು ಕಾರ್ಮಿಕ ಹೇಳಿದ್ದ. ಈ ದ್ವೇಷದಿಂದ ತಂಡ ಹೋಟೆಲ್ ಅಡುಗೆ ಕೋಣೆಗೆ ನುಗ್ಗಿ ಅಲ್ಲಿದ್ದ ಎಲ್ಲಾ ಸಾಮಗ್ರಿಗಳನ್ನು ಹಾನಿಗೊಳಿಸಿ, ಪೀಠೋಪಕರಣ, ಕಿಟಕಿ ಗಾಜು ಧ್ವಂಸಗೈದರು. ಅದನ್ನು ತಡೆಯಲು ಬಂದ ಹೋಟೆಲ್ ಮಾಲಕ ಮೊಹಮ್ಮದ್ ಉಂಬು (40) ಮತ್ತು ಕಾರ್ಮಿಕ ಮೊಹಮ್ಮದ್ (38) ಅವರಿಗೆ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ವಿದ್ಯಾನಗರ ಪೆÇಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಹೋಟೆಲಿಗೆ ಲಕ್ಷಾಂತರ ರೂ ನಷ್ಟ ಉಂಟಾಗಿದೆ.