ಅಕ್ಷಯ್-ಕರಣ್ ಕಾಂಬಿನೇಶನ್ನಿನಲ್ಲಿ ಬರುತ್ತಿದೆ ಕೇಸರಿ

ಕರಣ್ ಜೋಹರ್ ಹಾಗೂ ಅಕ್ಷಯ್ ಕುಮಾರ್ ಮೊದಲ ಬಾರಿಗೆ ಟೀಮ್ ಅಪ್ ಆಗುತ್ತಿದ್ದು ಅವರ ಕಾಂಬಿನೇಶನ್ನಿನಲ್ಲಿ `ಕೇಸರಿ’ ಎನ್ನುವ ಚಿತ್ರ ಸದ್ಯವೇ ಸೆಟ್ಟೇರಲಿದೆ. ಈ ಸಿನಿಮಾ 1857ರಲ್ಲಿ ನಡೆದ ಬ್ರಿಟಿಷ್ ಇಂಡಿಯನ್ ಆರ್ಮಿಯಲ್ಲಿರುವ ಸಿಖ್‍ರಿಗೂ ಹಾಗೂ ಟ್ರೈಬಲ್ ಜನಾಂಗದವರ ಮಧ್ಯೆಯೂ ನಡೆದ ಸಂಘರ್ಷದ ಕುರಿತಾಗಿದೆ.

ಈ ಚಿತ್ರದ ಬಗ್ಗೆ ಅಕ್ಷಯ್ ಭಾವನಾತ್ಮಕವಾಗಿ ಎಕ್ಸೈಟ್ ಆಗಿದ್ದೇನೆ. ಚಿತ್ರ 2019 ಹೋಳಿ ಹಬ್ಬದ ದಿನ ರಿಲೀಸ್ ಆಗಲಿದೆ ಎಂದು ಕನ್ಫರ್ಮ್ ಮಾಡಿದ್ದಾರೆ. ಈ ಸಿನಿಮಾವನ್ನು ಕರಣ್ ಜೋಹರ್ ನಿರ್ಮಿಸುತ್ತಿದ್ದು ಈ ಮೊದಲು ಈ ಚಿತ್ರದಲ್ಲಿ ಸಲ್ಮಾನ್ ಖಾನ್ ನಟಿಸುತ್ತಾನೆ ಎನ್ನಲಾಗಿತ್ತು. ಆದರೆ ಅಕ್ಷಯ್ ಈಗ ಆ ಪಾತ್ರದಲ್ಲಿ ನಟಿಸುವುದು ಪಕ್ಕಾ ಆಗಿದೆ. ಈ ಸಿನಿಮಾಗೆ ಅನುರಾಗ್ ಸಿಂಗ್ ಆಕ್ಷನ್ ಕಟ್ ಹೇಳಲಿದ್ದಾರೆ.