ಉಗ್ರರಿಂದ ಅಪಹೃತ ಕೇರಳ ಪಾದ್ರಿ ಬಿಡುಗಡೆ

ಕಾಸರಗೋಡು : ಕಳೆದ ವರ್ಷ ಯೆಮೆನ್ ದೇಶದ ಏಡೆನ್  ಎಂಬ  ಪಟ್ಟಣದಲ್ಲಿರುವ ಮದರ್ ತೆರೆಸಾ ಮಿಷನರೀಸ್ ಆಫ್ ಚ್ಯಾರಿಟಿ ನಡೆಸುತ್ತಿದ್ದ ವೃದ್ಧಾಶ್ರಮವೊಂದರಿಂದ ಆಪಹರಿಸಲ್ಪಟ್ಟಿದ್ದ ಕೇರಳ ಮೂಲದ ಪಾದ್ರಿ ಫಾದರ್ ಟಾಮ್ ಉಝುನ್ನಲಿಲ್ ಅವರನ್ನು ಓಮನ್ ದೇಶದ ಸಹಾಯದಿಂದ ರಕ್ಷಿಸಲಾಗಿದೆ. ವರದಿಯೊಂದರ ಪ್ರಕಾರ  ಅವರ ಬಿಡುಗಡೆಗೆ ರೂ 64 ಕೋಟಿ ಮೊತ್ತವನ್ನು ಇಸ್ಲಾಮಿಕ್ ಉಗ್ರರಿಗೆ ನೀಡಲಾಗಿದೆ. ಫಾ ಟಾಮ್ ಅವರನ್ನು  ಅವರ ಹುಟ್ಟೂರಾದ ಕೇರಳದ ಕೊಟ್ಟಾಯಂಗೆ ಕರೆತರಲಾಗುವುದು ಎಂದು ತಿಳಿದುಬಂದಿದೆ.