ಉಗ್ರವಾದದತ್ತ ಹೊರಳಿದವರಲ್ಲಿ ಮದರಸಗಳಲ್ಲಿ ಕಲಿತವರಿಗಿಂತ ಉನ್ನತ ಶಿಕ್ಷಣ ಪಡೆದವರು ಹೆಚ್ಚು

  • ಅರ್ಷದ್ ಆಲಂ

ಕಳೆದ ವರ್ಷ  ಉಗ್ರವಾದ ಸಂಬಂಧಿ ಪ್ರಕರಣಗಳಲ್ಲಿ ನಡೆದ ಬಂಧನಗಳ ವಿಚಾರದಲ್ಲಿ ರಾಷ್ಟ್ರೀಯ ತನಿಖಾ ಏಜನ್ಸಿ ಇತ್ತೀಚೆಗೆ ಬಿಡುಗಡೆಗೊಳಿಸಿದ  ಮಾಹಿತಿ  ರಾಷ್ಟ್ರೀಯ ಮಾಧ್ಯಮಕ್ಕೆ ಆಶ್ಚರ್ಯ ತಂದಿದೆ. ಬಂಧಿತರಲ್ಲಿ ಕೇವಲ ಶೇ 20ರಷ್ಟು ಮಂದಿ ಮಾತ್ರ ಮದರಸಾ ಶಿಕ್ಷಣ ಪಡೆದವರಾಗಿದ್ದಾರೆಂಬುದೇ ಈ ಆಶ್ಚರ್ಯಕ್ಕೆ ಕಾರಣ.

ಉಗ್ರವಾದ ಪ್ರಕರಣಗಳಲ್ಲಿ ರಾಷ್ಟ್ರೀಯ ತನಿಖಾ ಏಜನ್ಸಿಯಿಂದ ಬಂಧನಕ್ಕೊಳಗಾಗಿರುವ  ಹೆಚ್ಚಿನ ಮುಸ್ಲಿಂ ಯುವಕರು ಕಾಲೇಜು ಪದವೀಧರರಾಗಿದ್ದು ಅವರಲ್ಲಿ ಕೆಲವರು ಇಂಜಿನಿಯರಿಂಗ್ ಪದವೀಧರರೂ ಇದ್ದಾರೆ. ಆಧುನಿಕ ಮನೋವೃತ್ತಿಯ ಸುಶಿಕ್ಷಿತ ಮುಸ್ಲಿಮರಲ್ಲೂ ಉಗ್ರವಾದದತ್ತ ವಾಲುವವರಿದ್ದಾರೆಂಬುದನ್ನು ಇದು ಸೂಚಿಸುತ್ತಿದೆ.

ಮದರಸಾಗಳು ಉಗ್ರವಾದಿಗಳ ತಾಣವಾಗುತ್ತಿದೆಯೆಂಬುದು ಬಹಳ ಹಿಂದಿನಿಂದಲೂ ಕೇಳಿ ಬಂದಿರುವ ಆರೋಪವಾಗಿರುವುದರಿಂದ ಇತ್ತೀಚಿಗಿನ ರಾಷ್ಟ್ರೀಯ ತನಿಖಾ ಏಜನ್ಸಿಯ ಮಾಹಿತಿ ಮದರಸಾಗಳು ನಿರಾಳವಾಗುವಂತೆ ಮಾಡಿದೆ. ಭಾರತದ ವಿಚಾರ ಹೇಳುವುದಾದರೆ, ಇಲ್ಲಿನ ಮದರಸಾಗಳು ಮೊಣಕಾಲಿನ ತನಕ ಉಗ್ರವಾದದಲ್ಲಿ ಮುಳುಗಿಲ್ಲವೆಂಬುದಕ್ಕೆ ಒಂದು ಸರಳ ಕಾರಣ – ಅವುಗಳಿಗೆ ಆ ಸಾಮಥ್ರ್ಯವಿಲ್ಲ.  ಉಗ್ರವಾದಿಯಾಗಲು ಅಗತ್ಯವಿರುವ ಶಸ್ತ್ರಾಸ್ತ್ರ ತರಬೇತಿ ಹಾಗೂ ಅದಕ್ಕೆ ತಕ್ಕಂತೆ ಇರಬೇಕಾದ ಜ್ಞಾನವು ಮದರಸಾ ವಿದ್ಯಾರ್ಥಿಯೊಬ್ಬನಿಗೆ ಗಳಿಸಲು ಸಾಧ್ಯವಾಗುತ್ತಿಲ್ಲ. ಮದರಸಾಗಳಲ್ಲಿ  ಕೇವಲ ಕುರಾನ್ ಪಠನಕ್ಕೆ ಒತ್ತು ನೀಡಲಾಗುತ್ತಿದ್ದು ಮದರಸಾ ಶಿಕ್ಷಣ ಪಡೆದವನೊಬ್ಬ ನಕ್ಷೆಯಲ್ಲಿ ಅಮೆರಿಕಾ ಎಲ್ಲಿದೆಯೆಂದು  ತೋರಿಸಲು ಅಸಮರ್ಥನಾಗಿದ್ದಾನೆಂದರೆ ಆತನಿಂದ ಅತಿಯಾದ ನಿರೀಕ್ಷೆಗಳನ್ನಿಟ್ಟುಕೊಳ್ಳಬಾರದೆಂದೇ ಅರ್ಥವಾಗಿದೆ.

ಶಿಯಾಗಳು ಹಾಗೂ ಅಹಮದಿಗಳು ಇಸ್ಲಾಂನ ವಿರೋಧಿಗಳೆಂದು ಸಾಮಾನ್ಯ ಮದರಸಾದ ವಿದ್ಯಾರ್ಥಿಯೊಬ್ಬನಿಗೆ ಕಲಿಸಿದಲ್ಲಿ ಆತ ಈ ನಿಟ್ಟಿನಲ್ಲಿಯೇ ಯೋಚಿಸುತ್ತಾನೆ ವಿನಹ ಹಿಂದೂಗಳ ವಿರುದ್ಧ, ಜಿಹಾದ್ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ.

ಮೇಲಾಗಿ ಕ್ರೈಸ್ತರು ಹಾಗೂ ಹಿಂದುಗಳು ಮುಸ್ಲಿಮರ ವೈರಿಗಳೆಂಬ ತಪ್ಪು ಚಿತ್ರಣವನ್ನು ಮದರಸಾ ವಿದ್ಯಾರ್ಥಿಗಳ ತಲೆಯಲ್ಲಿ ತುಂಬಿಸಲು ಅಲ್ಲಿ ಸಮಯವಿಲ್ಲ. ಅವರು ಇಸ್ಲಾಂ ಧರ್ಮದ ಆಂತರಿಕ ವೈರಿಗಳನ್ನು ಹೇಗೆ ಮಟ್ಟ ಹಾಕುವುದೆಂಬುದರಲ್ಲೇ ಕಾಲಹರಣ ಮಾಡುತ್ತಾರೆ ಹಾಗೂ ಇದು ಅವರ ಪ್ರಥಮ ಆದ್ಯತೆ ಕೂಡ ಆಗಿದೆ.

ತರುವಾಯ ರಾಷ್ಟ್ರೀಯ ತನಿಖಾ ಏಜನ್ಸಿ ನೀಡಿದ ಮಾಹಿತಿಯಲ್ಲಿ ತಬ್ಲಿಘಿ ಜಮಾತ್ ಶಾಮೀಲಾತಿ ಬಗ್ಗೆ ಹೇಳಿರುವುದು ಕೂಡ ಆಶ್ಚರ್ಯ ಹುಟ್ಟಿಸಿದೆ. ದಿಯೋಬಂದ್É ಮೇಲೆ ನಿಷ್ಠೆ ಹೊಂದಿರುವ  ತಬ್ಲಿಘಿ ಜಮಾತ್ ಹಿಂಸೆಗೆ ಬದ್ಧ ವಿರೋಧಿಯಾಗಿದೆ ಎಂದು ಹೇಳಲಾಗುತ್ತಿದೆ. ಆದರೂ  ಈ ಸಂಘಟನೆಯವರು ಹೇಗೆ ಶಾಮೀಲಾದರು ಎಂಬ ಪ್ರಶ್ನೆಯಿದೆ.

ಅಹ್ಲೆಹದಿಸ್ ಕೂಡ ಉಗ್ರ  ಚಟುವಟಿಕೆಯಲ್ಲಿ ಭಾಗಿಯಾಗಿದೆಯೆಂದು ಹೇಳುವ ಏಜನ್ಸಿಯ ಮಾತುಗಳೂ ಆಶ್ಚರ್ಯ ಹುಟ್ಟಿಸುತ್ತಿದೆ. ಕಾಶ್ಮೀರದ ವಿಚಾರದಲ್ಲಿ  ಈ ಸಂಘಟನೆ ಇಂತಹುದೇ ಆರೋಪÀ ಎದುರಿಸಿದೆ. ಅಲ್ಲಿ ಅವರು ಸೂಫಿ ಪಂಥದ ವಿರುದ್ಧ ಕೂಡ ಆಂದೋಲನ ಹಮ್ಮಿಕೊಂಡಿದ್ದರು.

ಈ ಎಲ್ಲಾ ಬೆಳವಣಿಗೆಗಳಿಂದ ಉಗ್ರರ ತಾಣಗಳಾಗುತ್ತಿವೆ ಎಂದು ಕೇವಲ ಮದರಸಾಗಳತ್ತ ಮಾತ್ರ ಬೊಟ್ಟು ಮಾಡುವುದು ಸಾಧ್ಯವಾಗದು. ಮದರಸಗಳಲ್ಲಿ ಇಸ್ಲಾಮಿಕ್ ತತ್ವಗಳತ್ತವೇ ಹೆಚ್ಚಿನ ಆಕರ್ಷಣೆ ಬೆಳೆದಿದೆ ಹಾಗೂ ಇಸ್ಲಾಂ ಧರ್ಮದ ಆಂತರಿಕ ಸಮಸ್ಯೆಗಳತ್ತವೇ ಅವುಗಳು ಗಮನ