ಜೈಲಿನಲ್ಲಿದ್ದ ಜಿಹಾದಿ ಆರೋಪಿ ಭಟ್ಕಳದ ಶಬ್ಬೀರ ನಿರ್ದೋಷಿ : ಮಂಗಳೂರು ಕೋರ್ಟ್ ತೀರ್ಪು

ನಮ್ಮ ಪ್ರತಿನಿಧಿ ವರದಿ

ಭಟ್ಕಳ : “ಭಟ್ಕಳದಲ್ಲಿ 2008ರಲ್ಲಿ ಜೆಹಾದಿ ಕರಪತ್ರದ ಕುರಿತು ಭಾಷಣ ಮಾಡಿದ ಹಾಗೂ ನಕಲಿ ನೋಟು ಚಲಾವಣೆಗೆ ಯತ್ನಿಸಿ ಆರೋಪದಡಿಯಲ್ಲಿ ಬಂಧಿಸಲ್ಪಟ್ಟು ನಂತರ ಪುಣೆಯಲ್ಲಿನ 2 ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿದ್ದ ಇಲ್ಲಿನ ಮುಗ್ದಂ ಕಾಲೋನಿಯ ನಿವಾಸಿ ಮೌಲಾನಾ ಶಬ್ಬೀರ್ ಹಸನ್ ಗಂಗಾವಳಿ ನದ್ವಿ ಮಂಗಳೂರಿನ ಜಿಲ್ಲಾ ಹಾಗೂ ಸೆಶನ್ಸ್ ನ್ಯಾಯಾಲಯದಿಂದ ದೋಷಮುಕ್ತ ಹೊಂದಿ ಬಿಡುಗಡೆಯಾಗಿದ್ದಾರೆ” ಎಂದು ಅವರ ನ್ಯಾಯವಾದಿ ಅರ್ಷದ್ ಬಾಳೂರ್ ಹಾನಗಲ್ ತಿಳಿಸಿದ್ದಾರೆ.

ಮೌಲಾನಾ ಶಬ್ಬೀರ್ ಗಂಗಾವಳಿ ನದ್ವಿ ಅವರು ಈ ಸಂದರ್ಭದಲ್ಲಿ ಮಾತನಾಡಿ, “ನನ್ನನ್ನು  ಪುಣೆಯಲ್ಲಿನ ಮಸೀದಿಯಿಂದ ಮಧ್ಯರಾತ್ರಿಯ ನಂತರ ಕರೆದೊಯ್ಯಲಾಯಿತು. ಯಾವುದೇ ಖಾಸಗೀ ಅಂಗವನ್ನೂ ಬಿಡದೆ ಥಳಿಸಿ ಪ್ರಕರಣದ ಕುರಿತು ವಿಚಾರಣೆಯನ್ನು ನಡೆಸಲಾಯಿತು. ನನ್ನನ್ನು ಆ ಸಮಯಲ್ಲಿ ಅಮಾನವೀಯವಾಗಿ ನಡೆಸಿಕೊಳ್ಳಲಾಯಿತು. ಪ್ರಕರಣದಿಂದ ನ್ಯಾಯಾಲಯ ನನ್ನನ್ನು ದೋಷಮುಕ್ತಗೊಳಿಸಿರುವುದು ಸಂತಸ ತಂದಿದೆ. ನನ್ನಂತೆ ಅನೇಕ ಯುವಕರು ಇಂದು ಇದೇ ಪರಿಸ್ಥಿತಿ ಎದುರಿಸುತ್ತಿದ್ದಾರೆ. ನನಗೆ ನಮ್ಮ ನ್ಯಾಯಾಲಯಗಳ ಮೇಲೆ ನಂಬಿಕೆ ಇದೆ. ಯಾವುದೇ ಬೇಧ-ಭಾವ ತೋರದೇ ನ್ಯಾಯಾಲಯಗಳು ಕಾರ್ಯ ನಿರ್ವಹಿಸುತ್ತಿದ್ದು ಕೆಳಹಂತದಲ್ಲಿ ಇಲ್ಲವೇ ಮೇಲಿನ ಹಂತದಲ್ಲಿಯಾದರೂ ನ್ಯಾಯ ಖಂಡಿತ ದೊರೆಯುತ್ತದೆ” ಎಂದರು.

ಕುಟುಂಬದವರ ಹರ್ಷ

ನ್ಯಾಯಾಲಯದ ಆದೇಶದಂತೆ ಜೈಲಿನಿಂದ ಬಿಡುಗಡೆ ಹೊಂದಿ ಸೋಮವಾರ ತಡರಾತ್ರಿ ಭಟ್ಕಳಕ್ಕಾಗಮಿಸಿದ ಶಬ್ಬೀರ್ ಹಸನ್ ಅವರಿಗೆ ಮುಗ್ದಂ ಕಾಲನಿಯಲ್ಲಿ ಕುಟುಂಬಿಕರು ಹಾಗೂ ಊರವರು ಆದರದಿಂದ ಬರಮಾಡಿಕೊಂಡರು.