ಅನಾರೋಗ್ಯಪೀಡಿತ ಬಾಲಕಿ `ಇನಸ್ಪಿರೇಶನಲ್ ಪ್ರಿನ್ಸೆಸ್’

ಐಲ್ರ್ಯಾಂಡ್ :  ಹಲವಾರು ಕಾಯಿಲೆಗಳಿಂದ ಬಳಲುತ್ತಿರುವ ಎಂಟು ವರ್ಷದ ಬಾಲಕಿ ಕೋರಾ ಮೆಕ್ ಖ್ವಾಡೆ ಡೆನ್ವಿರ್  ಮುಖದಲ್ಲಿ ಮಂದಹಾಸ ಮಿನುಗಿದೆ. ಕಾರ್ನ್ ಲೋ ನಗರದ  ಸೌಂದರ್ಯ ಸ್ಪರ್ಧೆ ಆಯೋಜಕ ಸಂಸ್ಥೆಯೊಂದು ಆಕೆಗೆ `ಇನಸ್ಪಿರೇಶನಲ್ ಪ್ರಿನ್ಸೆಸ್’ ಎಂಬ ಬಿರುದು ನೀಡಿದೆ.

ಕಳೆದ ಕೆಲವು ವರ್ಷಗಳಿಂದ ಅನಾರೋಗ್ಯದಿಂದಾಗಿ  ಗಾಲಿ ಕುರ್ಚಿಯಲ್ಲಿಯೇ ಇರಬೇಕಾಗಿ ಬಂದಿರುವ  ಈ ಬಾಲಕಿ  ಅಪಸ್ಮಾರ, ಡಿಸ್ಟೋನಿಯಾ, ಸೆರೆಬ್ರಲ್ ಪಾಲ್ಸಿ,  ದೃಷ್ಟಿದೋಷ ಮತ್ತು ಸ್ಕೋಲಿಯೋಸಿಸ್ ರೋಗಗಳಿಂದ ಬಳಲುತ್ತಿದ್ದಾಳೆ. ಆಕೆಯ ಈ ಸ್ಥಿತಿ ಸ್ಥಳೀಯ ಜನ ಹಾಗೂ ಸೌಂದರ್ಯ ಸ್ಪರ್ಧೆ ಆಯೋಜಕರ ಮನಕಲಕಿತ್ತು. ಅವರು ಬಾಲಕಿಯ ತಾಯಿಯನ್ನು ಸಂಪರ್ಕಿಸಿ ಆಕೆಯ ಅನುಮತಿಯೊಂದಿಗೆ ಆಕೆಗೆ ವಿಶೇಷ ಬಿರುದು ನೀಡಿ ಕಿರೀಟ ತೊಡಿಸಿ ಗೌರವಿಸಿದರು. ಆಕೆ ಹಾಗೂ ಆಕೆಯ ಹೆತ್ತವರನ್ನು ಮುಂದಿನ ವರ್ಷ ಬೆಲ್ಫಾಸ್ಟ್ ನಗರದಲ್ಲಿ ನಡೆಯುವ ಸೌಂದರ್ಯ ಸ್ಪರ್ಧೆಯ ಅಂತಿಮ ಸುತ್ತನ್ನು ವೀಕ್ಷಿಸಲು ಆಹ್ವಾನಿಸಲಾಗಿದೆ.