ದನಸಾಗಾಟ ಟೆಂಪೋ ಚಾಲಕಗೆ ತಂಡ ಹಲ್ಲೆ

ನಮ್ಮ ಪ್ರತಿನಿಧಿ ವರದಿ

ಪುತ್ತೂರು : ಟೆಂಪೋದಲ್ಲಿ ದನ ಸಾಗಾಟ ಮಾಡುತ್ತಿದ್ದ ವೇಳೆ ತಂಡವೊಂದು ಟೆಂಪೋ  ಚಾಲಕ ರತ್ನಾಕರ್ ಕಾಸರಗೋಡು ಎಂಬವರಿಗೆ ಥಳಿಸಿದ ಘಟನೆ ಈಶ್ಚರಮಂಗಲ ಕನ್ನಡ್ಕದಲ್ಲಿ ನಡೆದಿದೆ.

ರತ್ನಾಕರ್ ಎಂಬವರು ಪೆರ್ಲಂಪಾಡಿ ಪಾಂಬಾರು ನಿವಾಸಿ ಜನಾರ್ದನ ಗೌಡ ಎಂಬವರಿಂದ ಸಾಕಲೆಂದು ದನಗಳನ್ನು ಖರೀದಿಸಿ ಟೆಂಪೋದಲ್ಲಿ ಸಾಗಿಸುತ್ತಿದ್ದ ವೇಳೆ ಈಶ್ವರಮಂಗಲದ ಸುರೇಶ್, ಸುಮಂತರನ್ನೊಳಗೊಂಡ ತಂಡ ಕನ್ನಡ್ಕದಲ್ಲಿ ಟೆಂಪೋವನ್ನು ಅಡ್ಡಗಟ್ಟಿ ಚಾಲಕನನ್ನು ಎಳೆದುಹಾಕಿ ಥಳಿಸಿದೆ. ಹಲ್ಲೆಯಿಂದ ರತ್ನಾಕರ್ ಗಂಭೀರ ಗಾಯಗೊಂಡಿದ್ದಾರೆ.

ಪೆÇಲೀಸರಿಗೆ ಹಲ್ಲೆ ಮಾಹಿತಿ ಸಿಕ್ಕಿ ಸ್ಥಳಕ್ಕೆ ಧಾವಿಸಿದಾಗ ಆರೋಪಿಗಳು ಪರಾರಿಯಾದರು. ಸುಮಂತ್, ಸುರೇಶ್ ತಂಡ ರತ್ನಾಕರ್ ವಿರುದ್ಧ ಪ್ರತಿದೂರು ನೀಡಿದ್ದು, ದನಗಳ್ಳತನ ಮಾಡಿ ಸಾಗಿಸುತ್ತಿದ್ದ ವೇಳೆ ಪ್ರಶ್ನಿಸಿದ್ದಕ್ಕೆ ನಮ್ಮ ಮೇಲೆ ರತ್ನಾಕರ್, ಶೆರೀಪು ಎಂಬವರ ತಂಡ ಹಲ್ಲೆ ನಡೆಸಿದೆ ಎಂದು ದೂರು ನೀಡಿದ್ದರೆ. ಇತ್ತಂಡದ ವಿರುದ್ಧ ಪ್ರಕರಣ ದಾಖಲಾಗಿದೆ.