ದೇವಳದಲ್ಲಿ ಕಳವುಗೈದ ಕೈದಿಗೆ ಜೈಲಿನೊಳಗೆ ಹಲ್ಲೆ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಎರಡು ದಿನದ ಹಿಂದೆಯಷ್ಟೇ ಜೈಲಿನಲ್ಲಿ ತಂಡವೊಂದು ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ಆರೋಪಿ ನವನೀತ್ ಶೆಟ್ಟಿ ಮತ್ತು ನಿರಂಜನ್ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿತ್ತು. ಆದರೆ ಇದೇ ತಂಡ ಇದೀಗ ಇನ್ನೊಬ್ಬ ಕೈದಿಗೂ ಹಲ್ಲೆ ನಡೆಸಿದೆ. ವಿಚಾರಣಾಧೀನ ಕೈದಿ ತಾರಾನಾಥ್(35) ಮೇಲೆ ಬಜಿಲಕೇರಿ ಧನರಾಜ್ ನೇತೃತ್ವದ ತಂಡ ಹಲ್ಲೆ ನಡೆಸಿದೆ.

ವೇಣೂರಿನ ದೇವಸ್ಥಾನದಲ್ಲಿ ನಡೆದ ಕಳವು ಪ್ರಕರಣದಲ್ಲಿ ಬಂಧಿತನಾಗಿ ಮಂಗಳೂರು ಜೈಲಿನಲ್ಲಿ ಬಂಧಿತನಾಗಿರುವ ಕೈದಿ ತಾರನಾಥ್ ಮೇಲೆ ಧನರಾಜ್, ವಿಖ್ಯಾತ್, ಲಾಯ್ ವೇಗಾಸ್, ಮುಕ್ತಾರ್ ಹಲ್ಲೆ ನಡೆಸಿದ್ದಾರೆ ಎಂದು ಪ್ರಕರಣ ದಾಖಲಾಗಿದೆ. ದೇವರ ಆಭರಣವನ್ನು ಕಳವು ಮಾಡಿರುವುದನ್ನು ಸಹಿಸದೇ ಆಕ್ರೋಶಗೊಂಡು ತಾವು ತಾರನಾಥ್ ಮೇಲೆ ಹಲ್ಲೆ ನಡೆಸಿರುವುದಾಗಿ ಆರೋಪಿಗಳು ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ.