ಗೌರಿ ಹತ್ಯೆ ತನಿಖಾ ತಂಡವನ್ನು ಸೇರಿದ ತೆಲಂಗಾಣ ಪೊಲೀಸರು

ಮಾವೋವಾದಿ ನಂಟಿನ ಸಾಧ್ಯತೆಯ ಬಗ್ಗೆ ತನಿಖೆ

ಬೆಂಗಳೂರು : ಪತ್ರಕರ್ತೆ ಹಾಗೂ ಸಾಮಾಜಿಕ ಕಾರ್ಯಾಕರ್ತೆ ಗೌರಿ ಲಂಕೇಶ್ ಅವರ ಹತ್ಯೆ ಪ್ರಕರಣವನ್ನು ತನಿಖೆ ನಡೆಸುತ್ತಿರುವ ಕರ್ನಾಟಕದ ವಿಶೇಷ ತನಿಖಾ ತಂಡದ ಜತೆಗೆ ಶುಕ್ರವಾರ  ತೆಲಂಗಾಣ ಪೊಲೀಸರೂ ಕೈಜೋಡಿಸಿದ್ದಾರೆ. ಗೌರಿ ಹತ್ಯೆ ಪ್ರಕರಣದಲ್ಲಿ ನಕ್ಸಲ್ ಸಂಬಂಧವಿರಬಹುದೇ ಎಂದು ಈ ತಂಡಗಳು ಜಂಟಿಯಾಗಿ ತನಿಖೆ ನಡೆಸಲಿವೆ.