ತಾಂತ್ರಿಕ ದೋಷ : 3 ಗಂಟೆ ತಡ ಏರಿಂಡಿಯಾ ವಿಮಾನ ಹಾರಾಟ

ನವದೆಹಲಿ : ತಾಂತ್ರಿಕ ದೋಷ ಕಂಡು ಬಂದ 282 ಪ್ರಯಾಣಿಕರಿದ್ದ ದಿಲ್ಲಿ ಮೂಲದ ಏರ್ ಇಂಡಿಯಾ ವಿಮಾನವೊಂದು ಮುಂಬೈ ವಿಮಾನ ನಿಲ್ದಾಣದಲ್ಲಿ ಮೂರೂವರೆ ತಾಸು ನಿಂತಿದ್ದು, ಬಳಿಕ ದಿಲ್ಲಿಯತ್ತ ಹಾರಾಟ ನಡೆಸಿದೆ. ಬೆಳಿಗ್ಗೆ 11.15ಕ್ಕೆ ದಿಲ್ಲಿಗೆ ಹಾರಾಟ ನಡೆಸಬೇಕಿದ್ದ ಬೋಯಿಂಗ್ 809, ತಾಂತ್ರಿಕ ತಪಾಸಣೆ ಬಳಿಕ ಮಧ್ಯಾಹ್ನ 2.34ಕ್ಕೆ ಅತ್ತ ಹಾರಾಟ ನಡೆಸಿದೆ ಎಂದು ಮೂಲಗಳು ಹೇಳಿವೆ.