2015ರಲ್ಲಿ ಸಮೀಕ್ಷೆ ನಡೆಸಿದ ಶಿಕ್ಷಕಿಯರಿಗೆ ಬರದ ವೇತನ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಕಾರ್ಕಳ : ರಾಜ್ಯ ಸರಕಾರ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಕಂದಾಯ ಇಲಾಖೆಯ ಸಹಭಾಗಿತ್ವದಲ್ಲಿ ಕಳೆದ 2015ರ ಎಪ್ರಿಲ್-ಮೇ ತಿಂಗಳಲ್ಲಿ ಶಾಲಾ ಶಿಕ್ಷಕ/ಶಿಕ್ಷಕಿಯರ ಮೂಲಕ ನಡೆಸಲಾದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ(ಜಾತಿಗಣತಿ)ಯಲ್ಲಿ  ತಾಲೂಕಿನಲ್ಲಿ 18 ಬ್ಲಾಕುಗಳಲ್ಲಿ ಹೆಚ್ಚುವರಿ ಸಹಾಯಕ ಗಣತಿದಾರರಾಗಿ ಕರ್ತವ್ಯ ನಿರ್ವಹಿಸಿದ ವಿವಿಧ ಶಾಲೆಗಳ 18 ಮಂದಿ ಗಣತಿದಾರರಿಗೆ ಸಂಬಂಧಪಟ್ಟ ಇಲಾಖೆಯಿಂದ ಇದುವರೆಗೂ ಗೌರವಧನ ಸಂದಾಯವಾಗಿಲ್ಲ.

ಗಣತಿ ಕಾರ್ಯ ಮುಗಿದು 2 ವರ್ಷಗಳು ಕಳೆದರೂ ಸಂಬಂಧಪಟ್ಟ ಇಲಾಖೆಯಿಂದ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೊಗಕ್ಕೆ ಸರಿಯಾದ ಮಾಹಿತಿ ರವಾನೆಯಾಗಿಲ್ಲ ಎಂಬುದು ಸ್ಪಷ್ಟವಾಗಿದೆ. ಸಂಭಾವನೆ ಕೈಗೆ ಸಿಗಲು ಇನ್ನೆಷ್ಟು ದಿನ ಕಾಯಬೇಕೆನ್ನುವುದು ಗೌರವ ಶಿಕ್ಷಕರ ಅಳಲಾಗಿದೆ.