2018 ಫೆಬ್ರವರಿಯಲ್ಲಿ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಪೂರ್ಣ

ಬೆಂಗಳೂರು : “ಇಲಾಖೆಯು ಡಿ 15ರೊಳಗೆ ಶಿಕ್ಷಕರ ವರ್ಗಾವಣೆ ಮಾರ್ಗಸೂಚಿಸಿ ಬಿಡುಗಡೆಗೊಳಿಸಲಿದ್ದು, 2018 ಫೆಬ್ರವರಿ 15ರೊಳಗೆ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಳಿಸಲಾಗವುದು” ಎಂದು ಪ್ರೈಮರಿ ಮತ್ತು ಸೆಕಂಡರಿ ಶಿಕ್ಷಣ ಸಚಿವ ತನ್ವೀರ್ ಸೇಠ್ ತಿಳಿಸಿದರು. “ಎಪ್ರಿಲ್ 10ರ ಬಳಿಕವೇ ವರ್ಗಾವಣೆ ಆದೇಶ ಜಾರಿಯಾಗಲಿದೆ” ಎಂದರು.