ಮಲಯಾಳ ಕಡ್ಡಾಯ ನೀತಿ ಜಾರಿಗೆ ಶಿಕ್ಷಕರ ವಿರೋಧ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಹೈಸ್ಕೂಲು ಅಧ್ಯಾಪಕರಿಗೆ ಮಂಗಳವಾರ ಜಿ ಎಚ್ ಎಸ್ ಕುಂಬಳೆ ಶಾಲೆಯಲ್ಲಿ ಹಮ್ಮಿಕೊಂಡಿದ್ದ ರಜಾ ಕಾಲದ ದ್ವಿತೀಯ ಹಂತದ ತರಬೇತಿ ಶಿಬಿರವನ್ನು ಅಧ್ಯಾಪಕರು ಬಹಿಷ್ಕರಿಸಿದರು.

ರಾಜ್ಯ ಸರಕಾರವು ಮಲೆಯಾಳ ಭಾಷಾ ಮಸೂದೆಯನ್ನು ಕಡ್ಡಾಯವಾಗಿ ಜಾರಿಗೊಳಿಸುವುದರ ವಿರುದ್ಧ ಕನ್ನಡ ಮಾಧ್ಯಮ ಅಧ್ಯಾಪಕರು ಈ ಬಹಿಷ್ಕಾರವನ್ನು ನಡೆಸಿದ್ದು, ಈ ಹಿಂದಿನ ತರಬೇತಿಯನ್ನೂ ಬಹಿಷ್ಕರಿಸಿದ್ದರು. ಅಧ್ಯಾಪಕರಾದ ಅಬ್ದುಲ್ ರಹಿಮಾನ್ ಎನ್, ಪ್ರಶಾಂತ್ ಶೇಣಿ, ಸಾವಿತ್ರಿ ಹೆಗಡೆ ಕುಂಬಳೆ, ಗಣೇಶಕುಮಾರ್ ಕೂಡ್ಲು, ಸಂದೀಪ್ ಬಂದಡ್ಕ ಮೊದಲಾದವರು ಬಹಿಷ್ಕಾರದ ನೇತೃತ್ವ ವಹಿಸಿದ್ದರು.