ವಿದ್ಯಾರ್ಥಿಗಳಿಗೆ ಕಿರುಕುಳ : ಶಾಲಾ ಶಿಕ್ಷಕ ಅಮಾನತು

ಸಾಂದರ್ಭಿಕ ಚಿತ್ರ

ಬೆಂಗಳೂರು : ಕಳೆದ ಹಲವು ತಿಂಗಳುಗಳಿಂದ ವಿದ್ಯಾರ್ಥಿಗಳಿಗೆ ಕಿರುಕುಳ ನೀಡುತ್ತಿದ್ದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಪ್ರಾಥಮಿಕ ಶಾಲೆಯ ಶಿಕ್ಷಕರೊಬ್ಬರನ್ನು ವಜಾ ಮಾಡಲಾಗಿದೆ. 6ರಿಂದ 14ರ ಹರೆಯದ ವಿದ್ಯಾರ್ಥಿಗಳನ್ನು ಬೆತ್ತಲೆ ಮಾಡುವುದು, ಒಳಚಡ್ಡಿಯಲ್ಲಿ ನಿಲ್ಲಿಸಿ ಫೋಟೋ ತೆಗೆಸುವುದು, ತರಗತಿಯಲ್ಲಿ ಅವಮಾನ ಮಾಡುವುದು, ಖಾಸಗಿ ವಿಚಾರವೆತ್ತಿ ನಿಂದಿಸುವುದು, ಶಾಲೆ ಬಿಟ್ಟ ಬಳಿಕ ತಿಂಡಿ ಮಾರಾಟ ಮಾಡುವಂತೆ ಒತ್ತಾಯಿಸುವುದು… ಹೀಗೆ ಅವರನ್ನು ಪೀಡಿಸಲಾಗುತ್ತಿತ್ತು. ಮಕ್ಕಳ ಹಕ್ಕು ಕಾರ್ಯಕರ್ತರ ದೂರಿನ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಬಿಬಿಎಂಪಿ ಇದೀಗ ಶಿಕ್ಷಕನನ್ನು ಅಮಾನತು ಮಾಡಿದೆ.

LEAVE A REPLY