ಹಿಟ್ & ರನ್ : ಶಿಕ್ಷಕನಿಗೆ ಗಾಯ

ಸಾಂದರ್ಭಿಕ ಚಿತ್ರ

ಬೆಳ್ತಂಗಡಿ : ಶಿಕ್ಷಕರೊಬ್ಬರು ದ್ವಿಚಕ್ರ ವಾಹನದಲ್ಲಿ ಶಾಲೆಗೆ ಹೋಗುತ್ತಿದ್ದ ಸಂದರ್ಭ ಪಡ್ಡಂದಡ್ಕ ಎಂಬಲ್ಲಿ ಮರಳು ಸಾಗಾಟದ ಲಾರಿಯೊಂದು ಡಿಕ್ಕಿ ಹೊಡೆದು ಪರಾರಿಯಾಗಿದ್ದು ಅಪಘಾತದಲ್ಲಿ ಶಿಕ್ಷಕರು ಗಂಭೀರ ಗಾಯಗೊಂಡರು. ಕಾಲು ತೀವ್ರ ಜಖಂಗೊಂಡಿದೆ. ಗಾಯಾಳುವನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವೇಣೂರು ಸನಿಹದ ಪಡ್ಡಂದಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕ ಮಾಧವ ಕಾರಂತ ಎಂಬವರೇ ಅಪಘಾತದಲ್ಲಿ ಗಾಯಗೊಂಡವರು. ಲಾರಿ ಚಾಲಕನ ಅಜಾಗರೂಕತೆ ಮತ್ತು ಅತೀ ವೇಗದ ಪರಿಣಾಮ ಅಪಘಾತ ಸಂಭವಿಸಿದೆ.