ಶಿಕ್ಷಕಿ ನೇಣಿಗೆ

ನಮ್ಮ ಪ್ರತಿನಿಧಿ ವರದಿ

ವಿಟ್ಲ : ಕೇಪು ಗ್ರಾಮದ ಅಡ್ಯನಡ್ಕ ಜಂಕ್ಷನಿನ ನಿವಾಸಿ ಬಿ ಸದಾಶಿವ ಭಟ್ ಪತ್ನಿ, ಇಲ್ಲಿನ ಜನತಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿರುವ ರತ್ನಾವತಿ (48) ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ರತ್ನಾವತಿಯ ಪತಿ ಕೆಲ ಸಮಯಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದು, ಶಿಕ್ಷಕಿಯ ಮನೆಯವರು ಶನಿವಾರ ರಾತ್ರಿ ಇವರಿಗೆ ಯಾವುದೋ ವಿಚಾರಕ್ಕೆ ಬುದ್ಧಿವಾದ ಹೇಳಿದ್ದರೆನ್ನಲಾಗಿದೆ. ರಾತ್ರಿ 10 ಗಂಟೆ ಸುಮಾರಿಗೆ ಎಂದಿನಂತೆ ಊಟ ಮಾಡಿ ಕೋಣೆಯಲ್ಲಿ ಮಲಗಿದ್ದ ರತ್ನಾವತಿ ಭಾನುವಾರ ಬೆಳಗ್ಗೆ ನೋಡಿದಾಗ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪುತ್ರಿ ನೀಡಿರುವ ದೂರಿನಂತೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.