ಮದ್ರಸಾ ವಿದ್ಯಾರ್ಥಿನಿಗೆ ಅಧ್ಯಾಪಕನಿಂದ ಲೈಂಗಿಕ ಕಿರುಕುಳ : ಕೆಸು ದಾಖಲು

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಮದ್ರಸಾಕ್ಕೆ ತೆರಳಿದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಲೆತ್ನಿಸಿದ ಆರೋಪದಡಿ ಮದ್ರಸಾ ಅಧ್ಯಾಪಕನ ವಿರುದ್ಧ ಆದೂರು ಪೆÇಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಚೇರೂರು ನಿವಾಸಿಯೂ ದೇಲಂಪಾಡಿ ಬಳಿಯ ಬೆಳ್ಳಿಪ್ಪಾಡಿಯ ಮದ್ರಸಾವೊಂದರ ಅಧ್ಯಾಪಕನಾದ ಶಂಸುದ್ದೀನ್ (39) ಎಂಬಾತನ ವಿರುದ್ಧ ದೂರು ದಾಖಲಿಸಲಾಗಿದೆ. ಘಟನೆ ಬೆಳಕಿಗೆ ಬರುತ್ತಿದ್ದಂತೆ ಈತ ತಲೆಮರೆಸಿಕೊಂಡಿದ್ದಾನೆಂದು ಪೆÇಲೀಸರು ತಿಳಿಸಿದ್ದಾರೆ. ಜ 5ರಂದು ಬೆಳಿಗ್ಗೆ ಮದ್ರಸಾಕ್ಕೆ ತಲುಪಿದ 3ನೇ ತರಗತಿ ವಿದ್ಯಾರ್ಥಿನಿಗೆ ಅಧ್ಯಾಪಕ ಶಂಸುದ್ದೀನ್ ಲೈಂಗಿಕ ಕಿರುಕುಳ ನೀಡಲೆತ್ನಿಸಿದ್ದನೆಂದು ಬಾಲಕಿ ಮನೆಯವರಲ್ಲಿ ತಿಳಿಸಿದ್ದಳು. ಬಳಿಕ ಬಾಲಕಿಯ ಹೆತ್ತವರು ಆದೂರು ಪೆÇಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇದರಂತೆ ಬಾಲಕಿಯಿಂದ ಪೆÇಲೀಸರು ಹೇಳಿಕೆ ದಾಖಲಿಸಿಕೊಂಡು ಶಂಸುದ್ದೀನ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿ ತಲೆಮರೆಸಿಕೊಂಡಿದ್ದು, ಆತನಿಗೆ ಶೋಧ ನಡೆಸುತ್ತಿರುವುದಾಗಿ ಪೆÇಲೀಸರು ತಿಳಿಸಿದ್ದಾರೆ.