ಶಿಕ್ಷಕನಿಂದ ಲೈಂಗಿಕ ಕಿರುಕುಳ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಶಿಕ್ಷಕನೊಬ್ಬನ ಲೈಂಗಿಕ ಕಿರುಕುಳ ಕೃತ್ಯವನ್ನು ಚೈಲ್ಡ್ ಲೈನ್ ಅಧಿಕಾರಿಗಳು ಬಹಿರಂಗಗೊಳಿಸಿದರು.

ಚೈಲ್ಡ್ ಲೈನ್ ಪ್ರತಿಯೊಂದು ಶಾಲೆಯ ವಿದ್ಯಾರ್ಥಿಗಳಿಗೆ ಕೌನ್ಸಿಲಿಂಗ್ ನಡೆಸಿ ಹಾಗೂ ಸಣ್ಣ ದೂರುಗಳನ್ನು ಕೂಡಾ ಗಂಭೀರವಾಗಿ ಪರಿಗಣಿಸಿ ತನಿಖೆಗೊಳಪಡಿಸುತ್ತಿದೆ. ಇಂತಹ ಕೌನ್ಸಿಲ್ ನಡೆಸುವ ಸಂದರ್ಭ ವಿದ್ಯಾರ್ಥಿಯೊಬ್ಬ ಗಣಿತ ಶಿಕ್ಷಕನ ಕಿರುಕುಳವನ್ನು ಬಹಿರಂಗಪಡಿಸಿದ ಬೆನ್ನಲೇ ಒಂಭತ್ತು ವಿದ್ಯಾರ್ಥಿಗಳು ಅಧ್ಯಾಪಕನ ವಿರುದ್ಧ ದೂರು ನೀಡಿದ್ದಾರೆ.

ವಿದ್ಯಾರ್ಥಿಗಳನ್ನು ಹತ್ತಿರ ನಿಲ್ಲಿಸಿ ಲೆಕ್ಕ ಪಾಠ ಮಾಡುತ್ತಿರುವ ಮಧ್ಯೆಯೇ ಅಧ್ಯಾಪಕ ತನ್ನ ನೀಚ ಕೃತ್ಯ ನಡೆಸುತ್ತಿದ್ದನೆಂದು ವಿದ್ಯಾರ್ಥಿಗಳು ದೂರಿದ್ದಾರೆ. ಈ ಬಗ್ಗೆ ಹೊರಗಡೆ ಮಾಹಿತಿ ಸೋರಿಕೆಯಾದರೆ ಬಿಡುವುದಿಲ್ಲವೆಂದು ಬೆದರಿಕೆ ಕೂಡಾ ನೀಡಿರುವುದಾಗಿ ಪೆÇಲೀಸರು ತಿಳಿಸಿದ್ದಾರೆ.ಬಂದಡ್ಕ ಪರಿಸರದ ಶಾಲೆಯೊಂದರಲ್ಲಿ ಈ ಘಟನೆ ನಡೆದಿದೆ. ಇದೀಗ ಪೆÇಲೀಸರು ಆರೋಪಿ ಅಧ್ಯಾಪಕನನ್ನು ಬಂಧಿಸಿದ್ದಾರೆ.

ಅಧ್ಯಾಪಕ ರಾಜಪುರಂ ಪೂಟಕಲ್ಲಂ ನಿವಾಸಿ ಡೋಮಿನಿ (45) ಬಂಧಿತ ಆರೋಪಿ. ಆದೂರು ಸಿಐ ತನಿಖೆ ನಡೆಸುತ್ತಿದ್ದಾರೆ.