ತೆರಿಗೆ ಪಾವತಿಸಲು ದಿನ ನಿಗದಿ ಇರಲಿ

ಮನೆತೆರಿಗೆ  ಜಾಗದ ತೆರಿಗೆ  ವರಮಾನ ತೆರಿಗೆ ಎಂದು ಪ್ರಜೆಗಳು ಪಾವತಿಸುವ ಕರ ಪಾವತಿಗಳು ಜನವರಿಯಿಂದ ಮೊದಲ್ಗೊಂಡು ಡಿಸೆಂಬರ್ ತಿಂಗಳಿಗೆ ಕೊನೆಯಾದರೆ ಚೆಂದವಲ್ಲವೇ  ಇದು ಸಾಧ್ಯವೇ
ದೇಶದ ಎಷ್ಟೋ ಹಳೆಯ ಕಾನೂನುಗಳನ್ನು ತಿದ್ದಿರುವ ಹಾಗೆನೇ ತೆರಿಗೆ ಪದ್ಧತಿಯ ಕಾನೂನನ್ನು ವರ್ಷದ ಮೊದಲ್ಗೊಂಡು ಡಿಸೆಂಬರ್ ತಿಂಗಳ ಇಂತಿಷ್ಟು ದಿನಾಂಕದೊಳಗೆ ಅಂತ ದಿನ ನಿಗದಿ ಮಾಡಲಾಗುವುದೇ   ತೆರಿಗಾಧಿಕಾರಿಗಳು ಇತ್ತ ಗಮನಹರಿಸುವರೆ   ಜನರಿಗಾಗುವ ತೊಂದರೆಯನ್ನು ಮನಗಂಡರೆ ಡಿಸೆಂಬರ್ ತಿಂಗಳ ಕೊನೆಯೊಳಗೆ ತೆರಿಗೆ ಪಾವತಿ ಕಷ್ಟವಾಗಬಾರದು

  • ಇಸ್ಮಾಯಿಲ್  ಕಲ್ಲಾಡಿ ಕುಪ್ಪೆಪದವು