ತೆರಿಗೆ ವಂಚನೆ ಮಾಹಿತಿ ನೀಡುತ್ತಿದ್ದ ಲಾರಿ ಚಾಲಕಗೆ ತಂಡದಿಂದ ಹಲ್ಲೆ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ತೆರಿಗೆ ವಂಚಿಸಲು ಚೆಕ್ ಪೆÇೀಸ್ಟ್ ತಪ್ಪಿಸಿ ಅಧಿಕಾರಿಗಳ ಜೇಬು ತುಂಬಿಸಿ, ಸಾಮಗ್ರಿಗಳನ್ನು ಸಾಗಿಸುತ್ತಿದ್ದವರ ಮಾಹಿತಿಯನ್ನು ಅಧಿಕಾರಿಗಳಿಗೆ ನೀಡಿದ ಧ್ವೇಷದಲ್ಲಿ ಲಾರಿ ಚಾಲಕನೊಬ್ಬನನ್ನು ಹಲ್ಲೆಗೈದು ಗಂಭೀರ ಗಾಯಗೊಳಿಸಲಾಗಿದೆ.

ನಾಯ್ಕಾಪು ನಿವಾಸಿ ಎನ್ ಕೇಶವ (38) ಹಲ್ಲೆಗೀಡಾದ ವ್ಯಕ್ತಿ. ಇವರನ್ನು ಕುಂಬಳೆ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಕುಂಬಳೆ ಮಸೀದಿಗೆ ಸಮೀಪವಿರುವ ಹೋಟೆಲೊಂದರಲ್ಲಿ ಚಾ ಕುಡಿಯುತ್ತಿದ್ದ ವೇಳೆ ಅಲ್ಲಿಗೆ ಆಗಮಿಸಿದ ಮಾಂಗಾಡ್ ನಿವಾಸಿ ಲಾರಿ ಚಾಲಕ ಹಾಗೂ ಕ್ಲೀನರ್ ಸೇರಿ ರಸ್ತೆ ಮಧ್ಯೆ ಎಳೆದು ಹಲ್ಲೆಗೈದಿರುವುದಾಗಿ ದೂರಲಾಗಿದೆ. ಕಳೆದ ವರ್ಷಗಳಿಂದ ತೆರಿಗೆ ವಂಚಿಸಿ ಹಾಗೂ ಚೆಕ್ ಪೆÇೀಸ್ಟ್ ತಪ್ಪಿಸಿ ಸಾಗುತ್ತಿದ್ದ ಮಾಹಿತಿಯನ್ನು ಕೇಶವ ಅಧಿಕಾರಿಗಳಿಗೆ ನೀಡುತ್ತಿದ್ದನೆನ್ನಲಾಗಿದೆ. ಕ್ರಮಕ್ಕೆ ಮುಂದಾಗದ ಅಧಿಕಾರಿಗಳ ವಿರುದ್ಧ ದೂರು ನೀಡಿರುವುದನ್ನು ಅಭಿನಂದಿಸಿ ಕೇಶವನಿಗೆ ಪ್ರಧಾನ ಮಂತ್ರಿ ಕಚೇರಿಯಿಂದ ಪತ್ರ ಕೂಡಾ ಲಭಿಸಿದೆ. ಆರು ತಿಂಗಳ ಹಿಂದೆ ಮನೆಗೆ ಬಂದ ತಂಡವೊಂದು ಕೊಲೆ ಬೆದರಿಕೆ ಕೂಡಾ ಹಾಕಿತ್ತೆಂದು ದೂರಲಾಗಿದೆ.