ಹಾಕಿ ಪ್ಲೇಯರ್ ಪಾತ್ರದಲ್ಲಿ ತಾಪ್ಸೀ

`ಪಿಂಕ್’ ಚಿತ್ರದಲ್ಲಿಯ ಮನೋಜ್ಞ ನಟನೆಗಾಗಿ ಎಲ್ಲರಿಂದಲೂ ಹೊಗಳಿಸಿಕೊಂಡಿರುವ ತಾಪ್ಸೀ ಪನ್ನು ಈಗ ಬಾಲಿವುಡ್ಡಿನಲ್ಲಿ ಒಂದೊಂದೇ ಮೆಟ್ಟಿಲು ಏರುತ್ತಿದ್ದಾಳೆ. `ನಾಮ್ ಶಬಾನಾ’ ಚಿತ್ರದ ನಂತರ ಈಗ ಜುಡ್ವಾ-2′ ಚಿತ್ರದಲ್ಲಿ ವರುಣ್ ಧಾವನ್ ಜೊತೆ ನಟಿಸುತ್ತಿದ್ದಾಳೆ. ಆ ಸಿನಿಮಾದ ಚಿತ್ರೀಕರಣ ಮುಕ್ತಾಯದ ಹಂತದಲ್ಲಿರುವಾಗಲೇ ತಾಪ್ಸೀ ಈಗ ಇನ್ನೊಂದು ಚಿತ್ರಕ್ಕೆ ಆಯ್ಕೆಯಾಗಿದ್ದಾಳೆ. ಶಾದ್ ಆಲಿ ನಿರ್ದೇಶನದ ಇನ್ನೂ ಹೆಸರಿಡದ ಚಿತ್ರದಲ್ಲಿ ತಾಪ್ಸೀ ಹಾಕಿ ಪ್ಲೇಯರ್ ಆಗಿ ತೆರೆ ಮೇಲೆ ಬರಲಿದ್ದಾಳೆ.

`ಉಡ್ತಾ ಪಂಜಾಬ್’, `ಪಿಲೌರಿ’ ಚಿತ್ರಗಳಲ್ಲಿ ನಟಿಸಿರುವ ದಿಲ್ಜಿತ್ ದೋಸಾಂಜ್ ಈ ಸಿನಿಮಾದಲ್ಲಿ ತಾಪ್ಸೀ ಜೊತೆ ನಟಿಸಲಿದ್ದು ಆತ ಕೂಡಾ ಸಿನಿಮಾದಲ್ಲಿ ಹಾಕಿ ಪ್ಲೇಯರ್. ಇಂಡಿಯಾದ ಹಾಕಿ ಪ್ಲೇಯರ್ ಸಂದೀಪ್ ಸಿಂಗ್ ಜೀವನಾಧರಿತ ಚಿತ್ರವೆಂದು ಈ ಮೊದಲು ಸುದ್ದಿಯಾಗಿದ್ದರೂ ಲೇಟೆಸ್ಟ್ ಸುದ್ದಿಯ ಪ್ರಕಾರ ಸಂದೀಪ್ ಸಿಂಗ್ ಜೀವನದ ಕೆಲವು ಭಾಗವಷ್ಟೇ ಈ ಸಿನಿಮಾದಲ್ಲಿದ್ದು ಹಾಕಿ ಆಟಕ್ಕಿಂತ ಇದು ಅವರ ಪ್ರೇಮ ಜೀವನಕ್ಕೇ ಹೆಚ್ಚು ಒತ್ತು ನೀಡುವ ಚಿತ್ರ ಎನ್ನಲಾಗಿದೆ. ತಾಪ್ಸೀ ನಟಿಸಲಿರುವ ಪಾತ್ರಕ್ಕೆ ಮೊದಲು ಇಲಿಯಾನಾ ಡಿ ಕ್ರೂಜ್ ಹೆಸರು ಕೇಳಿಬಂದಿತ್ತು. ಆದರಿಗ ತಾಪ್ಸೀಗೆ ಆ ಪಾತ್ರದಲ್ಲಿ ನಟಿಸುವ ಅವಕಾಶ ಸಿಗುತ್ತಿದೆ. ಅಕ್ಟೋಬರಿನಿಂದ ಶೂಟಿಂಗ್ ಶುರುವಾಗುವ ಸಾಧ್ಯತೆ ಇದೆ.