ಕೊಕಾ ಕೋಲಾ, ಪೆಪ್ಸಿಗೆ ಇಂದಿನಿಂದ ಗುಡ್ ಬೈ ಹೇಳಲಿರುವ ತ ನಾಡು

ಚೆನ್ನೈ : ತಮಿಳುನಾಡಿನ ಪ್ರಮುಖ ವರ್ತಕರ ಸಂಘಟನೆಗಳು ಕೈಗೊಂಡ ನಿರ್ಧಾರದಂತೆ ಇಂದಿನಿಂದ ರಾಜ್ಯದಲ್ಲಿ ಕೊಕಾ ಕೋಲ ಮತ್ತು ಪೆಪ್ಸಿ ಕಂಪೆನಿಗಳ ಉತ್ಪನ್ನಗಳನ್ನು ಬಹಿಷ್ಕರಿಸಲಾಗುವುದು.

ಈ ಕೋಲಾ ಉತ್ಪನ್ನಗಳನ್ನು ನಿಷೇಧಿಸಬೇಕೆಂಬ ಬೇಡಿಕೆ ಮೊದಲ ಬಾರಿಗೆ ರಾಜ್ಯದಲ್ಲಿ ಕಳೆದ ತಿಂಗಳು ನಡೆದ ಜಲ್ಲಿಕಟ್ಟು ಹೊರಾಟದ ಸಂದರ್ಭ ಕೇಳಿ ಬಂದಿತ್ತು. ಬಹಳ ಬೇಗನೇ ಈ ಬೇಡಿಕೆಗೆ ಬಲ ದೊರೆತು ಹಲವಾರು ಮಂದಿ ಸ್ವಯಂಪ್ರೇರಿತರಾಗಿ ಪೆಪ್ಸಿ, ಕೊಕಾ ಕೋಲಾ ಉತ್ಪನ್ನಗಳನ್ನು ಬಹಿಷ್ಕರಿಸಲಾರಂಭಿಸಿದ್ದರು. ಇದೀಗ ವರ್ತಕರೂ ಇದಕ್ಕೆ ಸಾಥ್ ನೀಡಿದ್ದಾರೆ.