ತಲ್ಲೂರು ಗ್ರಾ ಪಂ.ಗೆ ಏನಾಗಿದೆ

ಕುಂದಾಪುರ ತಾಲೂಕಿನ ತಲ್ಲೂರು ಪಂಚಾಯತ ವ್ಯಾಪ್ತಿಯ ಸರಕಾರ ಯೋಜನೆಯಡಿ ವಿವಿಧ ಕಾಂಕ್ರೀಟ್ ರಸ್ತೆ ಕಾಮಗಾರಿ ಹೆಸರಿನಲ್ಲಿ ಒಬ್ಬ ವ್ಯಕ್ತಿಗೆ ಏಳೆಂಟು ರಸ್ತೆಗಳ ಗುತ್ತಿಗೆಯನ್ನು ಟೆಂಡರ್ ಮೂಲಕ ಮಾಡಿಸಿಕೊಡುವುದು ಯಾವ ನ್ಯಾಯ  ನಿಯತ್ತಿನಿಂದ ಇರುವವರು ಈಗಿನ ಕಾಲದಲ್ಲಿ ಬೆಲೆಯಿಲ್ಲವೇ  ಪಕ್ಷದ ಹೆಸರಿನಲ್ಲಿ ಕಾರ್ಯಕರ್ತನೆಂದು ತಿರುಗಾಡುವ ವ್ಯಕ್ತಿಗೆ ಒಬ್ಬನೇ ವ್ಯಕ್ತಿಗೆ ಇಷ್ಟೊಂದು ಗುತ್ತಿಗೆ ಕೆಲಸವನ್ನು ಕೊಡುವ ಹಿಂದಿನ ಮರ್ಮ ತಿಳಿಯುತ್ತಿಲ್ಲ. ಸರಕಾರದ ಯೋಜನೆಗಳು ಪಂಚಾಯತ್, ಕಾರ್ಯಕರ್ತರೊಂದಿಗೆ ಶಾಸಕರ ಒಪ್ಪಿಗೆಯಂತೆ ಮಾಡುವುದಾದರೆ ಇನ್ನುಳಿದರ ಪಾಡೇನು  ಇದೇ ರೀತಿ ಮುಂದುವರಿದರೆ ಪಂಚಾಯತ್ ಮುಂದೆ ಅನ್ಯಾಯದ ವಿರುದ್ಧ ಧರಣಿ ಕುಳಿತುಕೊಳ್ಳುವುದು ಅನಿವಾರ್ಯವಾದೀತು

  • ಕೆ ರಾಜು ಕೋಟ್ಯಾನ್  ಕೋಟೆಬಾಗಿಲು